LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಇಂಡಿಯಾ ಪ್ಯಾಷನ್ ಐಕಾನ್ ನಿಂದ ಲಲಿತ್ ಅಶೋಕ್ ನಲ್ಲಿ ಅದ್ದೂರಿ ಪ್ಯಾಷನ್ ಶೋ

ಅತ್ಯಾಧುನಿಕ ವಸ್ತ್ರ, ವಿನ್ಯಾಸಗಳನ್ನು ತೊಟ್ಟು ಸಂಭ್ರಮಿಸಿದ ರೂಪದರ್ಶಿಯರು

ಬೆಂಗಳೂರು : ಇಂಡಿಯಾ ಪ್ಯಾಷನ್ ಐಕಾನ್ ನಿಂದ ನಗರದ ಲಲಿತ್ ಅಶೋಕದಲ್ಲಿ ಅದ್ದೂರಿ “ಇಂಡಿಯಾ ಪ್ಯಾಷನ್ ಐಕಾನ್ – 2025” ಪ್ಯಾಷನ್ ಶೋ ಆಕರ್ಷಣೆಯ ಕೇಂದ್ರ ಬಿಂದುವಾಗಿತ್ತು. ಅತ್ಯಾಧುನಿಕ ವಸ್ತ್ರ ವಿನ್ಯಾಸಗಳನ್ನು ತೊಟ್ಟ ರೂಪದರ್ಶಿಯರು ರಾಂಪ್ ಮೇಲೆ ಹೆಜ್ಜೆ ಹಾಕಿ ಸಂಭ್ರಮಿಸಿದರು.  



 ಪ್ಯಾಷನ್ ಶೋ ವಸ್ತ್ರ ವಿನ್ಯಾಸಗಳ ಸೊಬಗು ಹೆಚ್ಚಿಸಿತು. ಝಗಮಗಿಸುವ ದೀಪಾಲಂಕಾರ, ಕುಣಿದು ಕುಪ್ಪಳಿಸುವ ಸಂಗೀತ ಪ್ರೇಕ್ಷಕರನ್ನು ಮಂತ್ರಮುಗ್ದಗೊಳಿಸಿತು. ಫ್ಯಾಷನ್ ಶೋ ಮರೆಯಲಾಗದ ಅನುಭವವನ್ನು ನೀಡಿತು. ಬೆಂಗಳೂರಿನ ಸೌಂದರ್ಯ ಪ್ರಿಯರು ಜಮಾಯಿಸಿದ್ದ ಈ ಶೋ ಯಶಸ್ವಿಯಾಗಿ ಸಂಪನ್ನಗೊಂಡಿತು. 



ಲೀನಾ ಸವೂರ್ , ಗಾಯತ್ರಿ ಸಂದೀಪ್, ಶೀಲಾ ಶೆಟ್ಟಿ, ರೂಪಮೌಳಿ, ನಜೀಂ ಶೈಕ್, ಆಡಮ್ ಪಾಷಾ, ಸೌತ್ ಇಂಡಿಯಾ ಗಾರ್ಮೆಂಟ್ ಅಸೋಸಿಯೇಷನ್ ಅಧ್ಯಕ್ಷ ಅನುರಾಗ್ ಸಿಂಗ್‌ಲಾ ಮತ್ತಿತರರ ಸಮ್ಮುಖದಲ್ಲಿ ರೂಪದರ್ಶಿಯರು ತನ್ನ ಬೆಡಗು, ಬಿನ್ನಾಣವನ್ನು ಪ್ರದರ್ಶಿಸಿದರು. 

 

ಲೀನಾ ಸವೂರ್ ಮಾತನಾಡಿ, ಲೀನಾ ಸವೂರ್ ಈ ಬಾರಿಯ ಪ್ಯಾಷನ್ ಶೋ ನಲ್ಲಿ ಇತ್ತೀಚಿನ ಉಡುಪುಗಳನ್ನು ಪ್ರದರ್ಶಿಸಲಾಗಿದೆ. ಈ ಪ್ಯಾಷನ್ ಶೋನಲ್ಲಿ ವಿಶೇಷ ವಿನ್ಯಾಸಗಳನ್ನು ಪ್ರದರ್ಶಿಸಲಾಗಿದೆ ಎಂದರು. 



ಮಾದರಿಗಳು ಟೈ ನಾಟ್ ಡಿಸೈನರ್‌ಗಳು ರಚಿಸಿದ ಆಕರ್ಷಕ ಭಾರತೀಯ ಇಥ್ನಿಕ್ ಉಡುಪುಗಳನ್ನು ಜವ್ವನೆಯರು ಪ್ರದರ್ಶಿಸಿದರು, ಬಳಿಕ ಅಲೆಕ್ಸ್ ಅವರ ಸೃಜನಶೀಲ ಮನಸ್ಸಿನಿಂದ ಮೂಡಿಬಂದ ಪಶ್ಚಿಮ ಭೂಖಂಡದ ಈವಿನಿಂಗ್ ವೇರ್ ಸಂಗ್ರಹ ಮತ್ತು ನವೀನ್ ಕುಮಾರ್ ಅವರ ಪ್ರಸಿದ್ಧ ಹಾಟ್ ಕುತೂರ್ ಸೃಜನಶೀಲತೆಯಿಂದ ರಂಗು ಪಡೆಯಿತು. ಸುಷಾಂತ್ ದಿವ್ಗಿಕರ್, ನವೀನ್ ಕುಮಾರ್ ಅವರ ಪಾಲ್ಗೊಳ್ಳುವಿಕೆ ಪ್ಯಾಷನ್ ಶೋ ರಂಗೇರುವಂತೆ ಮಾಡಿತು. 

 

ವಿ.ಎಲ್.ಸಿ.ಸಿ ಮೂಲಕ ನಿರ್ಮಿತ ಅಪ್ರತಿಮ ರೂಪವು ಶ್ರೇಷ್ಟತೆಯ ಮಟ್ಟವನ್ನು ಸೃಷ್ಟಿಸಿ, ಈ ಸಂಭ್ರಮವನ್ನು ಇನ್ನಷ್ಟು ವೃದ್ಧಿಸಿದೆ. ಈ ಅದ್ಭುತ ಸಮಾರಂಭದಲ್ಲಿ ಲಿನಾ ಸವೂರ್, ಲ ಫೆನಿಕ್ಸ್ ಶೋ ನಿರ್ದೇಶಕರಾದವರು, ಅವರ ಪ್ರೇರಣಾದಾಯಕ ಪುಸ್ತಕ ಫಿನಿಕ್ಸ್ ["Fenix Rising"] ಅನ್ನು ಅನಾವರಣಗೊಳಿಸಿದರು. ಇದು ಹೈ-ಫ್ಯಾಷನ್ ಶೋನ ಪ್ರೇರಣೆಯನ್ನು ಮತ್ತು ಸುಂದರ ಸ್ಪರ್ಧೆಯ ಒಗ್ಗೂಡಿಕೆವಿಯನ್ನು ಒಂದೇ ವೇದಿಕೆಯಲ್ಲಿ ಸಂಯೋಜಿಸಿತು. 



ಲವಿನಾ ಅಂಡ್ ದ ಎನ್ಸೆಂಬಲ್ ಎಂಬ ಗೋವಾ ಮೆಲೋಡಿಯಸ್ ಬ್ಯಾಂಡ್‌ನ ಅದ್ಭುತ ಸಂಗೀತ ಮನಸೂರೆಗೊಂಡಿತು. ಮರ್ವಿನ್ ಫೆರ್ನಾಂಡಿಸ್, ಸೆಬಿ ಸಿಲ್ವೆಸ್ಟರ್, ರಾಯ್‌ಸ್ಟನ್ ಡಿಸೋಜಾ, ಪೀಟರ್ಸನ್ ಗೊಮ್ಸ್ ಮತ್ತು ಲವಿನಾ ಸೊರೀಸ್ ಅವರ ಗಾಯನ ಮಂತ್ರಮುಗ್ಧಗೊಳಿಸಿತು.
Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST