ಫ್ರಾಂಚೈಸ್ ಆಧಾರಿತ ಸರಣಿಯಾದ ಇಂಡಿಯನ್ ರೇಸಿಂಗ್ ಲೀಗ್ (ಐ.ಆರ್.ಎಲ್) ಮೇಲೆ ಗಮನ ಕೇಂದ್ರೀಕರಿಸಲಾಗುತ್ತಿದೆ. ಜೊತೆಗೆ ಫಾರ್ಮುಲಾ 4 ಇಂಡಿಯನ್ ಚಾಂಪಿಯನ್‌ಶಿಪ್ ಮತ್ತು ಜೆಕೆ ಟೈರ್ ನ್ಯಾಷನಲ್ ರೇಸಿಂಗ್ ಚಾಂಪಿಯನ್‌ಶಿಪ್ ಎಲ್.ಜಿ.ಬಿ ಎಫ್4 ಸಹ ನಡೆಯಲಿದೆ.
ಸತತ 28 ನೇ ವರ್ಷಗಳಿಂದ ಜೆಕೆ ಟೈರ್ ನ್ಯಾಷನಲ್ ರೇಸಿಂಗ್ ಚಾಂಪಿಯನ್‌ಶಿಪ್ ದೇಶದಲ್ಲಿ ನಿರಂತರವಾಗಿ ನಡೆಯುತ್ತಿದ್ದು, ಇದು ಅತಿ ದೀರ್ಘಕಾಲದ ಮೋಟಾರ್‌ಸ್ಪೋರ್ಟ್ ಸ್ಪರ್ಧೆಯಾಗಿದೆ.
ಐ.ಆರ್.ಎಲ್ ಪಾಯಿಂಟ್ ಟೇಬಲ್‌ನಲ್ಲಿ ಹೈದರಾಬಾದ್ ಬ್ಲ್ಯಾಕ್‌ಬರ್ಡ್ಸ್ 51 ಅಂಕಗಳೊಂದಿಗೆ ಅಲ್ಪ ಮುನ್ನಡೆಯಲ್ಲಿದೆ. ಜಾನ್ ಲ್ಯಾಂಕಾಸ್ಟರ್ (ಬ್ರಿಟನ್), ಅಕ್ಷಯ್ ಬೊಹ್ರಾ, ಗೇಬ್ರಿಯೆಲಾ ಜಿಲ್ಕೋವಾ (ಜೆಕಿಯಾ) ಮತ್ತು ಮೊಹಮ್ಮದ್ ರಯಾನ್ ನೇತೃತ್ವದ ಹೈದರಾಬಾದ್ ಬ್ಲ್ಯಾಕ್‌ಬರ್ಡ್ಸ್ 51 ಅಂಕಗಳೊಂದಿಗೆ ಅಲ್ಪ ಮುನ್ನಡೆ ಹೊಂದಿದೆ. 50 ಅಂಕ ಪಡೆದು ಕೇವಲ ಒಂದು ಅಂಕದ ಹಿಂದಿರುವ ನಿರಂತರ ಸ್ಪೀಡ್ ಡೆಮನ್ಸ್ ದೆಹಲಿ ತಂಡವು ಆರಂಭದಲ್ಲಿಯೇ ಮುನ್ನಡೆ ಸಾಧಿಸಲು ಸಿದ್ಧವಾಗಿದ್ದು, ಕೋಲ್ಕತ್ತಾ ರಾಯಲ್ ಟೈಗರ್ಸ್ 49 ಅಂಕಗಳೊಂದಿಗೆ ಘರ್ಜಿಸುತ್ತಿದೆ. ಕರಿ ಬೋರ್ಡ್ ಸ್ಪೀಡ್ ವೆ ನಲ್ಲಿ ಈ ರೇಸಿಂಗ್ ನಡೆಯಲಿದೆ.

ಈ ಸೀಸನ್ ಬಗ್ಗೆ ಆರ್.ಪಿ.ಪಿ.ಎಲ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಅಖಿಲೇಶ್ ರೆಡ್ಡಿ ಮಾತನಾಡಿ “ಎರಡು ಹಂತಗಳ ನಂತರ ಈ ಸೀಸನ್‌ನಲ್ಲಿ ಸ್ಪರ್ಧಾತ್ಮಕತೆ ಮತ್ತು ಅಭಿಮಾನಿಗಳ ಭಾಗವಹಿಸುವಿಕೆ ಉತ್ಸಾಹದಾಯಕ ಮಟ್ಟದಲ್ಲಿದೆ. ಕರಿ ಮೋಟಾರ್ ಸ್ಪೀಡ್‌ವೇಗೆ ಮರಳುವುದು ಯಾವಾಗಲೂ ವಿಶೇಷವಾಗಿದೆ. ದೇಶೀಯ ಪ್ರತಿಭೆಗಳನ್ನು ಪೋಷಿಸುವುದು ಮತ್ತು ಅಂತರರಾಷ್ಟ್ರೀಯ ಮಾನದಂಡಗಳಿಗೆ ಸಮನಾಗಿ ಸುಸ್ಥಿರ ಪರಿಸರ ವ್ಯವಸ್ಥೆಯನ್ನು ಸೃಷ್ಟಿಸುವುದು ನಮ್ಮ ಧ್ಯೇಯವಾಗಿದೆ ಎಂದರು.
ರೌಂಡ್ 3 ನಲ್ಲಿ ಇಂಡಿಯನ್ ರೇಸಿಂಗ್ ಲೀಗ್ ನಲ್ಲಿ 2 ರೋಚಕ ರೇಸ್‌ಗಳು, ಫಾರ್ಮುಲಾ 4 ಇಂಡಿಯನ್ ಚಾಂಪಿಯನ್‌ಷಿಪ್ ನಲ್ಲಿ 4 ವೇಗದ ಸ್ಪರ್ಧೆಗಳು ಹಾಗೂ ಜೆಕೆ ಟೈರ್ ನ್ಯಾಷನಲ್ ರೇಸಿಂಗ್ ಚಾಂಪಿಯನ್‌ಷಿಪ್ –ನಲ್ಲಿ 3 ಕಠಿಣ ಹೋರಾಟಗಳು ನಡೆಯಲಿವೆ.