LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಹ್ಯಾಪಿಡೆಂಟ್ “ಚಮ್ಕಿಂಗ್ ಗಮ್: ಚಮ್ಕಾ ಮುಸ್ಕಾನ್, ಜಗ್ಮಗ್ ಜಹಾನ್” ಅಭಿಯಾನ

ನಗುವಿನ ಮಹತ್ವ ಒತ್ತಿ ಹೇಳುವ ಆಕರ್ಷಕ ಕಥಾನಕವನ್ನು ಅನಾವರಣಗೊಳಿಸಿದ ಹ್ಯಾಪಿಡೆಂಟ್

ಬೆಂಗಳೂರು : ದೇಶದ ಅತ್ಯಂತ ಜನಪ್ರಿಯ ಚ್ಯೂಯಿಂಗ್ ಗಮ್ ಬ್ರ್ಯಾಂಡ್‌ಗಳಲ್ಲಿ ಒಂದಾಗಿರುವ ಹಾಗೂ ಪರ್ಫೆಟ್ಟಿ ವ್ಯಾನ್ ಮೆಲ್ಲೆ ಇಂಡಿಯಾದ ಹ್ಯಾಪಿಡೆಂಟ್ ಹೊಸ ಜಾಹೀರಾತು ವೀಡಿಯೋ ಬಿಡುಗಡೆ ಮಾಡಿದೆ. ಹೊಸ ಕ್ಯಾಂಪೇನ್‌ನ ಹೆಸರು “ಚಮ್ಕಿಂಗ್ ಗಮ್: ಚಮ್ಕಾ ಮುಸ್ಕಾನ್, ಜಗ್‌ಮಗ್‌ ಜಹಾನ್” ಎಂಬುದಾಗಿದೆ.

ಹೊಸತನದ ಸಿನಿಮೀಯ ಸನ್ನಿವೇಶಗಳನ್ನು ಮತ್ತೆ ನೆನಪಿಸುತ್ತದೆ. ಆಕರ್ಷಕ ನಗು ಮತ್ತು ಸ್ಫೂರ್ತಿ ನೀಡುವ ಅದರ ಶಕ್ತಿಯನ್ನೂ ಇದು ಪ್ರತಿಬಿಂಬಿಸುತ್ತಿದ್ದು, ದೃಶ್ಯಾತ್ಮಕವಾಗಿ ಅದ್ಭುತ ಜಗತ್ತನ್ನು ಇದು ಅನಾವರಣಗೊಳಿಸುತ್ತಿದೆ. ಮೆಕ್ಯಾನ್‌ ವರ್ಲ್ಡ್‌ಗ್ರೂಪ್ ಇಂಡಿಯಾ ಪರಿಕಲ್ಪನೆ ರೂಪಿಸಿದ ಅಭಿಯಾನವನ್ನು ಸಾಹಿತಿ ಪ್ರಸೂನ್ ಜೋಷಿ ಮುನ್ನಡೆಸುತ್ತಿದ್ದಾರೆ. ಇವರೇ ಹಿನ್ನೆಲೆ ಹಾಡಿಗೆ ಸಾಹಿತ್ಯ ರಚಿಸಿ ಸ್ವತಃ ಹಾಡಿದ್ದಾರೆ. ಬಾಲಿವುಡ್‌ನ ಜನಪ್ರಿಯ ಸಂಗೀತ ನಿರ್ದೇಶಕ ಶಂತನು ಮೋಯಿತ್ರಾ ಸಂಗೀತ ನೀಡಿದ್ದಾರೆ.

ಆಕರ್ಷಕ ನಗು ಬೀರುವ ಒಂದು ತಂಡವು ತಮ್ಮ ಸುತ್ತಲಿನ ಪ್ರದೇಶದಲ್ಲಿ ಕಸ ಎಸೆಯುವುದರಿಂದ ಈ ಅಭಿಯಾನದ ವೀಡಿಯೋ ಆರಂಭವಾಗುತ್ತದೆ. ಇದು ಊಹಾತ್ಮಕವಾಗಿದ್ದರೂ ಅತ್ಯಂತ ಆಕರ್ಷಕವೂ ಆಗಿದೆ. ಒಂದು ಸಣ್ಣ ಕೃತ್ಯವೂ ಕೂಡಾ ದೊಡ್ಡ ಮಟ್ಟದ ಸಾಮಾಜಿಕ ಬದಲಾವಣೆಗೆ ಕಾರಣವಾಗುತ್ತದೆ ಎಂಬುದನ್ನು ಬೆಳಕಿಗೆ ತಂದಿದೆ.

ಸಾಂಸ್ಕೃತಿಕ ಒಳನೋಟ ಮತ್ತು ದೈನಂದಿನ ವರ್ತನೆಗಳನ್ನು ಆಧರಿಸಿರುವ ಈ ಫಿಲಂ, ಬೆಚ್ಚನೆಯ ಭಾವ, ತಾದಾತ್ಮ್ಯತೆ ಮತ್ತು ಒಂದು ಅದ್ಭುತ ಸಂದೇಶವನ್ನು ಹೊರಡಿಸುತ್ತದೆ. ಸರಳ ವರ್ತನೆಯೂ ಕೂಡಾ ನಮ್ಮೆಲ್ಲರ ಜವಾಬ್ದಾರಿಯನ್ನು ಸ್ಫೂರ್ತಿಗೊಳಿಸುತ್ತದೆ ಎಂಬುದನ್ನು ಇದು ಸೂಚಿಸುತ್ತದೆ. ಅತ್ಯುತ್ತಮ, ಹೆಚ್ಚು ಪರಿಣಾಮ ಬೀರುವ ದೃಶ್ಯಗಳನ್ನು ಒಳಗೊಂಡಿರುವ ಈ ಕ್ಯಾಂಪೇನ್‌ ಪ್ಯಾಪಿಡೆಂಟ್‌ನ ಪರಂಪರೆಗೆ ಹೊಸ ಹೊಳಪನ್ನು ನೀಡುತ್ತದೆ. ಇದರಲ್ಲಿ ಪ್ಯಾಲೇಸ್ ಮತ್ತು ಫೋಟೋಗ್ರಾಫರ್‌ ಜಾಹೀರಾತುಗಳ ನೆನಪನ್ನೂ ಇದು ನೀಡುತ್ತದೆ.



ಈ ಬಿಡುಗಡೆಯ ಬಗ್ಗೆ ಮಾತನಾಡಿದ ಪರ್ಫೆಟ್ಟಿ ವ್ಯಾನ್ ಮೆಲ್ಲೆ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ನಿಖಿಲ್ ಶರ್ಮಾ “ಪರ್ಫೆಟ್ಟಿ ವ್ಯಾನ್ ಮೆಲ್ಲೆ ಇಂಡಿಯಾದಲ್ಲಿ ನಾವು ಸಾಂಸ್ಕೃತಿಕವಾಗಿ ಮತ್ತು ಭಾವನಾತ್ಮಕವಾಗಿ ಹೊಂದಿಕೆಯಾಗುವ ಬ್ರ್ಯಾಂಡ್ ಅನ್ನು ನಿರ್ಮಾಣ ಮಾಡುವುದು ನಮ್ಮ ಗುರಿಯಾಗಿದೆ ಎಂದರು.

ಪರ್ಫೆಟ್ಟಿ ವ್ಯಾನ್ ಮೆಲ್ಲೆ ಇಂಡಿಯಾದ ಮಾರ್ಕೆಟಿಂಗ್ ನಿರ್ದೇಶಕ ಗುಂಜನ್ ಖೇತಾನ್ ಹೇಳುವಂತೆ “ಹ್ಯಾಪಿಡೆಂಟ್ ಹಿಂದಿನಿಂದಲೂ ಕಲ್ಪನಾತ್ಮಕ ಕಥೆ ಬರೆಯುವುದರಲ್ಲಿ ಹೆಸರಾಗಿದೆ. ಈ ಕಥೆಯು ಬರಿ ಮನರಂಜನೆಯನ್ನಷ್ಟೇ ಅಲ್ಲ, ಅದು ನಮ್ಮನ್ನು ತಟ್ಟುತ್ತದೆ. ಕಲ್ಪನೆ, ಅಭಿವ್ಯಕ್ತಿ ಮತ್ತು ತಾದಾತ್ಮ್ಯದ ಭಾವವನ್ನು ಈ ಅಭಿಯಾನವನ್ನು ಸಂಭ್ರಮಿಸುತ್ತದೆ ಎಂದರು.
Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST