LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಗುಂಡ ಸ್ಟೇಷನ್ ಗ್ರಾಮವನ್ನು ಸ್ಥಳಾಂತರ ಮಾಡಲು ಮನವಿ

ಮರಿಯಮ್ಮನಹಳ್ಳಿ : ನಮ್ಮ ಗ್ರಾಮವನ್ನು ಸ್ಥಳಾಂತರ ಮಾಡಿಕೊಡಿ ಎಂದು ಬಿ.ಎಂ.ಎಂ ಕಂಪನಿ ವಿರುದ್ಧ ಪ್ರತಿಭಟನೆ ಮಾಡುತ್ತಿರುವ ರೈತರು, ನಮ್ಮ ಗೋಳು ಕೇಳೋರು ಯಾರು ಅಂತ ಗುಂಡ ಸ್ಟೇಷನ್ ಗ್ರಾಮದಲ್ಲಿ ಅನಿರ್ದಿಷ್ಟ ಹೋರಾಟ ಮಾಡುತ್ತಿದ್ದಾರೆ.

ಡಣಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಗುಂಡ ಸ್ಟೇಷನ್ ಗ್ರಾಮದಲ್ಲಿ ನಾವು ಸುಮಾರು ನೂರಾರು ವರ್ಷಗಳಿಂದ 35 ಕುಟುಂಬಗಳು ವಾಸ ಮಾಡುತ್ತಿದ್ದೇವೆ. ನಮ್ಮ ಗ್ರಾಮದಿಂದ ಕೇವಲ 100 ಮೀಟರ್ ಅಂತರದಲ್ಲಿ. 2024 ರ(ನೂತನ) ಪ್ಲಾಂಟ್ ಬ್ಲಾಸ್ಟ್ ಫರ್ನಿಸರ್ ಆರಂಭಿಸಿದ್ದು, ದಿನ ನಿತ್ಯದ ಧೂಳು ಅತಿಯಾದ ಶಬ್ದದಿಂದ ಮತ್ತು  ಗ್ಯಾಸ್ ಬಿಡುಗಡೆಯಿಂದ ಮಕ್ಕಳು ಸೇರಿದಂತೆ ಹಿರಿಯರಿಗೂ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಅತಿಯಾದ ಶಬ್ದ ಮತ್ತು ಧೂಳು ವಾಸನೆಯಿಂದ ಬಿಪಿ, ಅಸ್ತಮ ಹಾಗೂ ಕಣ್ಣಿನ ಸಮಸ್ಯೆ ಶಬ್ದ ದಿಂದ ಮೈಗ್ರೇನ್ ನಂತಹ ವಿಪರೀತ ತಲೆ ನೋವೂ 'ಹೆಡ್ ಸ್ಟ್ರೋಕ್ ತಲೆಸುತ್ತುವಿಕೆ, ವಾಂತಿ, ಭೇದಿ. ಹೀಗೆ ಹತ್ತು ಹಲವು ಸಮಸ್ಯೆಗಳು ಉಲ್ಬಣವಾಗುತ್ತಿವೆ. ಇದಕ್ಕೆ ಸಂಬಂಧಪಟ್ಟ ಕಂಪನಿಯವರಗಲಿ ಹಾಗೂ ಸ್ಥಳೀಯ ಯಾವುದೇ ಅಧಿಕಾರಿಗಳು ಜನಪ್ರತಿನಿದಿನಗಳು ನಮ್ಮ ಗ್ರಾಮಕ್ಕೆ ಭೇಟಿ ನೀಡದೇ ಇರುವುದು ವಿಪರ್ಯಾಸ. ಆದ್ದರಿಂದ ಗ್ರಾಮದಲ್ಲಿ ಹೋರಾಟ ಅನಿವಾರ್ಯತೆ ಆಗಿದೆ ಎಂದು ಸ್ಥಳೀಯರು ಆಗ್ರಹ ವ್ಯಕ್ತ ಪಡಿಸಿದರು.



ನಮ್ಮ ಗ್ರಾಮವನ್ನು ಸ್ಥಳಾಂತರ ಮಾಡಿಕೊಡಬೇಕು.  ಇಲ್ಲವಾದಲ್ಲಿ ಗ್ರಾಮದಲ್ಲಿ ಸಮಸ್ಯೆ ಬಗೆಹರೆಸುವ ತನಕ ಅನಿರ್ದಿಷ್ಟ ಹೋರಾಟ ನಡೆಸಲು ತೀರ್ಮಾನಿಸಲಾಗಿದೆ ಎಂದು ನೊಂದ ಗ್ರಾಮಸ್ಥರು ಹೇಳಿದರು.

ನಂತರ ಸ್ಥಳಕ್ಕೆ ಹೊಸಪೇಟೆ ತಹಶೀಲ್ದಾರ್ ಶೃತಿ ಎಂ.ಮಳಪ್ಪ ಗೌಡ ರವರು ಭೇಟಿ ನೀಡಿ ಅಲ್ಲಿನ ಸಮಸ್ಯೆಗಳನ್ನು ತಿಳಿದುಕೊಂಡರು. ನಂತರ ಗ್ರಾಮದ ಜನರು ಮನವಿ ಪತ್ರವನ್ನು ಸ್ವೀಕರಿಸಿದರು.
Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST