ಶಾಲೆಯಲ್ಲಿ ಸುಸಜ್ಜಿತ ಕಟ್ಟಡದಿಂದ ಕೂಡಿರುವ ಕೊಠಡಿಗಳು, ವಿಶಾಲವಾದ ಮೈದಾನ, ಶೌಚಾಲಯ, ಬಿಸಿಯೂಟ ಸೇರಿ ನಾನಾ ಸೌಲಭ್ಯಗಳು ಮಕ್ಕಳನ್ನು ಶಾಲೆಯತ್ತ ಸೆಳೆಯುತ್ತಿದೆ. ಅನುಭವಿ ಶಿಕ್ಷಕರಿಂದ ಕೂಡಿರುವ ಶಾಲೆಗೆ ಇನ್ನಷ್ಟು ಪುಷ್ಟಿ ನೀಡಿದೆ. ಇಲ್ಲಿನ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಖಾಸಗಿ ಶಾಲೆಯ ಮಕ್ಕಳಿಗೆ ಪೈಪೋಟಿ ನೀಡುವಷ್ಟು ಸಶಕ್ತರಾಗಿದ್ದಾರೆ. ಹಾಗಾಗಿ, ಈ ಶಾಲೆ 75 ವರ್ಷ ಪೂರೈಸಿದ ಹಿನ್ನೆಲೆ ಅಮೃತ ಮಹೋತ್ಸವ ಆಚರಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿದೆ.

ಏನೇನು ಸೌಲಭ್ಯ: ವಿದ್ಯಾರ್ಥಿಗಳಿಗೆ ಸಮವಸ್ತ್ರ, ಪುಸ್ತಕ, ಸಮಯಕ್ಕೆ ಸರಿಯಾಗಿ ಬಿಸಿಯೂಟ, ನಾನಾ ಕ್ರೀಡೆಗಳನ್ನು ಅಭ್ಯಾಸ ಮಾಡಿಲು ವಿಶಾಲ ಮೈದಾನ, ನೂತನ ಕೊಠಡಿ, ಕಂಪ್ಯೂಟರ್ ಶಿಕ್ಷಣ, ಗ್ರಂಥಾಲಯ, ಆಟಿಕೆ ಸಾಮಗ್ರಿ, ಶೌಚಾಲಯಗಳು, ಶುದ್ದ ಕುಡಿವ ನೀರಿನ ವ್ಯವಸ್ಥೆ, ಶಾಲೆಯಆವರಣದಲ್ಲಿ ಗಿಡಮರಗಳನ್ನು ನೆಟ್ಟು ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕಲ್ಪಿಸಲಾಗಿದೆ.

ಶಾಲೆಯ ಹಿರಿಮೆ: 1950 ರಲ್ಲಿ ಪ್ರಾರಂಭವಾದ ಈ ಶಾಲೆಯಲ್ಲಿ ಈವರೆಗೆ ವಿದ್ಯಾಭ್ಯಾಸ ಮಾಡಿದ ವಿದ್ಯಾರ್ಥಿಗಳು ಎಂಜಿನಿಯರ್, ಶಿಕ್ಷಕರು, ಡಾಕ್ಟರ್ ಸೇರಿ ನಾನಾ ಇಲಾಖೆಯಲ್ಲಿ ಉನ್ನತ ಅಧಿಕಾರಿಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ
ಗ್ರಾಮಿಣ ಪ್ರದೇಶದಲ್ಲಿ ಈ ಶಾಲೆ ತಾಲೂಕು, ಜಿಲ್ಲಾ ರಾಜ್ಯ ಮಟ್ಟದಲ್ಲಿ ಕ್ರೀಡಾ ಲೋಕದಲ್ಲಿ ತನ್ನದೇ ಆದ ಕೊಡುಗೆ ನೀಡಿದೆ. ಈ ಶಾಲೆಯು ಕಳೆದ ಐದು ವರ್ಷಗಳಲ್ಲಿ ವಿದ್ಯಾರ್ಥಿಗಳು ಥ್ರೋ ಬಾಲ್ ನಲ್ಲಿ ಹುಡುಗ ಮತ್ತು ಹುಡುಗಿಯರು 2ನೇ ಸ್ಥಾನ, ಥ್ರೋ ಬಾಲ್ ತಾಲೂಕು ಮಟ್ಟದಲ್ಲಿ 2ನೇ ಸ್ಥಾನ, ವೈಯಕ್ತಿಕ ಡಿಸ್ಕ್ ಥ್ರೋನಲ್ಲಿ ಬಿ.ಸಿಂಧು ರಾಜ್ಯ ಮಟ್ಟಕ್ಕೆ ಆಯ್ಕೆ, ಖೋ ಖೋದಲ್ಲಿ ದ್ವಿತೀಯ ಸ್ಥಾನ ಸೇರಿ ಅಂತರ್ ಶಾಲಾ ಮಟ್ಟದಲ್ಲಿ ಕಬಡ್ಡಿ ತಂಡ ಪ್ರಥಮ ಸ್ಥಾನ ಪಡೆದು ಶಾಲೆಯ ಕೀರ್ತಿ ಹೆಚ್ಚಿಸಿದೆ. ಸ್ಪರ್ಧೆಗಳಲ್ಲಿ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ ಎಂದು ಶಾಲೆಯ ದೈಹಿಕ ಶಿಕ್ಷಕ ತಿಳಿಸಿದ್ದಾರೆ.