ಸರಕಾರಿ ಆದರ್ಶ ವಿದ್ಯಾಲಯ ಬಾಲಕಿಯರ ಕಬ್ಬಡಿ ತಂಡ ತಾಲ್ಲುಕು ಮಟ್ಟಕ್ಕೆ ಆಯ್ಕೆ
ಅರಕೇರಾ : ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಸಮನ್ವಯ ಅಧಿಕಾರಿಗಳ ಕಾರ್ಯಾಲಯ ದೇವದುರ್ಗ ಹಾಗೂ ಸರಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆ ಹೇಮನೂರು ಇವರ ಸಂಯುಕ್ತ ಆಶ್ರಯದಲ್ಲಿ ಅರಕೇರಾ ಹೋಬಳಿ ಮಟ್ಟದ ಮಾದರಿ ಹಿರಿಯ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟ ದಿನಾಂಕ 12-8-2025ರಂದು ಜರುಗಿತು.
ಅದರಲ್ಲಿ ಅರಕೇರಾ ಪಟ್ಟಣದ ಸರಕಾರಿ ಆದರ್ಶ ವಿದ್ಯಾಲಯ ಅರಕೇರಾ ವಿದ್ಯಾರ್ಥಿಗಳು ಭಾಗವಹಿಸಿ ಬಾಲಕಿಯರ ಕಬ್ಬಡ್ಡಿ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿ ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
600 ಮೀ ಓಟದಲ್ಲಿ ಚೈತ್ರ ತಂದೆ ನಾಗರಾಜ ದ್ವಿತೀಯ ಸ್ಥಾನ, 600 ಮೀ ಓಟದಲ್ಲಿ ಮರಿಲಿಂಗ ತಂದೆ ಶಿವಪ್ಪ ಪ್ರಥಮ ಸ್ಥಾನ,ತಿಮ್ಮನಗೌಡ ತಂದೆ ಯಂಕಪ್ಪ 200 ಮೀ ಓಟದಲ್ಲಿ ದ್ವಿತೀಯ ಸ್ಥಾನ 4x100 ರಿಲೇ ಯಲ್ಲಿ ದ್ವಿತೀಯ ಸ್ಥಾನ ಪಡೆದು ತಾಲೂಕ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ ಇವರಿಗೆ ಶಾಲೆಯ ಮುಖ್ಯ ಗುರುಗಳು ಹಾಗೂ ಶಿಕ್ಷಕರು ಅಭಿನಂದನೆ ತಿಳಿಸಿರುತ್ತಾರೆ
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.