LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
State News Districts

ಕುಂದಾಪುರದಲ್ಲಿ ಉಚಿತ ಐಟಿಐ ತರಬೇತಿ, ಜಾಗತಿಕ ಉದ್ಯೋಗಾವಕಾಶ

ಬಳ್ಳಾರಿ: ಪ್ರಸ್ತುತ ಜಗತ್ತಿನಲ್ಲಿ ಎಐ ತಂತ್ರಜ್ಞಾನ ಬಿರುಗಾಳಿಯಂತೆ ಬೆಳೆಯುತ್ತಿದ್ದು, ಮುಂಬರುವ ದಿನಗಳಲ್ಲಿ ಸಾಂಪ್ರದಾಯಿಕ ಕಚೇರಿ ಉದ್ಯೋಗಗಳು ಕಣ್ಮರೆಯಾಗಲಿವೆ. ಆದರೆ, ತಾಂತ್ರಿಕವಾಗಿ ಕೈಯಾರೆ ಕೆಲಸ ಮಾಡುವ ಕೌಶಲ್ಯಾಧರಿತ ಉದ್ಯೋಗಿಗಳಿಗೆ ಜಾಗತಿಕ ಮಾರುಕಟ್ಟೆಯಲ್ಲಿ ಬೇಡಿಕೆ ಮತ್ತು ವೇತನ ಎರಡೂ ದುಪ್ಪಟ್ಟಾಗಲಿದೆ. ಜಾಗತಿಕ ಬದಲಾವಣೆಯನ್ನು ಮನಗಂಡು ಬಳ್ಳಾರಿ ಸೇರಿದಂತೆ ಕಲ್ಯಾಣ ಕರ್ನಾಟಕದ ಬಡ ಹಾಗೂ ಹಿಂದುಳಿದ ಯುವಜನತೆಗೆ ಉಚಿತವಾಗಿ ಉನ್ನತ ತಂತ್ರಜ್ಞಾನದ ಕೌಶಲ್ಯ ಕಲಿಸಲು ಮೂಡುಬಿದ್ರೆಯ ಡಾ. ಜಿ. ರಾಮಕೃಷ್ಣ ಆಚಾರ್ ಚಾರಿಟೇಬಲ್ ಟ್ರಸ್ಟ್ ಹಾಗೂ ಜಾಗತಿಕ ತಂತ್ರಜ್ಞಾನದ ಪ್ರಮುಖ ಸಂಸ್ಥೆಯಾದ ಎಸ್ಕೆಎಫ್ಎಲಿಕ್ಸರ್ ಇಂಡಿಯಾ ಪ್ರೈ.ಲಿ. ಜಂಟಿಯಾಗಿ ಮುಂದಾಗಿವೆ. 

 

ಎಸ್ಎಸ್ಎಲ್ ಸಿ ಉತ್ತೀರ್ಣ ಅಥವಾ ಅನುತ್ತೀರ್ಣರಾದ ಅಭ್ಯರ್ಥಿಗಳಿಗೆ ಉಡುಪಿ ಜಿಲ್ಲೆಯ ಕುಂದಾಪುರದಲ್ಲಿರುವ ಅತ್ಯಾಧುನಿಕ ಎಸ್ಕೆಎಫ್ ಎಲಿಕ್ಸರ್ ಇಂಡಸ್ಟ್ರಿಯಲ್ ಟ್ರೇನಿಂಗ್ ಸೆಂಟರ್ ನಲ್ಲಿ ಸಂಪೂರ್ಣ ಉಚಿತ ಐಟಿಐ ಶಿಕ್ಷಣ ಮತ್ತು ಕೌಶಲ್ಯಾಧಾರಿತ ತಾಂತ್ರಿಕ ತರಬೇತಿಯನ್ನು ನೀಡಲಾಗುತ್ತಿದೆ.  ಪ್ರಾಯೋಗಿಕ ಕಲಿಕೆ ಹಾಗೂ ಜಾಗತಿಕ ಉದ್ಯೋಗ ಬರೀ ಪುಸ್ತಕದ ಪಾಠಕ್ಕಷ್ಟೇ ಸೀಮಿತವಾಗದೆ, ನೈಜ ಕೈಗಾರಿಕಾ ಪರಿಸರದಲ್ಲಿ ಕೆಲಸ ಮಾಡಲು ವಿದ್ಯಾರ್ಥಿಗಳನ್ನು ಸಿದ್ಧಪಡಿಸುವ ಒಂದು ವರ್ಷದ ವಿಶೇಷ ತರಬೇತಿ ಇದಾಗಿದೆ. 

 

ಲಭ್ಯವಿರುವ ಪ್ರಮುಖ ಕೋರ್ಸ್ಗಳು:

ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್, ಫಿಟ್ಟಿಂಗ್ ಮತ್ತು ವೆಲ್ಡಿಂಗ್, ಹಾಗೂ ಮೆಕ್ಯಾನಿಕ್ (ಎಲೆಕ್ಟ್ರಿಕ್, ಏಸಿ ಮತ್ತು ಪ್ಲಂಬಿಂಗ್). 

ಪ್ರಾಯೋಗಿಕ ಅನುಭವ: ತರಬೇತಿಯ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ 3 ತಿಂಗಳ ಕಡ್ಡಾಯ ಇಂಟರ್ನ್ಶಿಪ್ ಹಾಗೂ ಪ್ರತ್ಯಕ್ಷ ಕೈಗಾರಿಕಾ ತರಬೇತಿ ಇರಲಿದೆ. 

 

ವಿದೇಶದಲ್ಲೂ ಉದ್ಯೋಗಾವಕಾಶ: ತರಬೇತಿ ಮುಗಿದ ತಕ್ಷಣ ಭಾರತದಾದ್ಯಂತ ಮಾತ್ರವಲ್ಲದೆ, ಆಸ್ಟ್ರೇಲಿಯಾ ಸೇರಿದಂತೆ ಪ್ರಮುಖ ವಿದೇಶಿ ಕೈಗಾರಿಕಾ ಸಂಸ್ಥೆಗಳಲ್ಲಿ ಉಚಿತವಾಗಿ ಉದ್ಯೋಗಾವಕಾಶ ಹಾಗೂ ಸೂಕ್ತ ಮಾರ್ಗದರ್ಶನ ಕಲ್ಪಿಸಲಾಗುತ್ತದೆ. 

 

ಗ್ರಾಮೀಣ ಮಹಿಳೆಯರಿಗೂ ಸ್ವಾವಲಂಬನೆಯ ಆಸರೆ

ಕೇವಲ ಪುರುಷರಿಗಷ್ಟೇ ಸೀಮಿತವಾಗದೆ, ಗ್ರಾಮೀಣ ಮಹಿಳೆಯರು ಸಹ ಆರ್ಥಿಕವಾಗಿ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಸಂಸ್ಥೆಯು ವೇದಿಕೆ ಸಜ್ಜುಗೊಳಿಸಿದೆ. ಮಹಿಳೆಯರಿಗಾಗಿ 6 ತಿಂಗಳ ಅವಧಿಯ ಉಚಿತ ಫ್ಯಾಷನ್ ಡಿಸೈನ್ ಕೋರ್ಸ್ ಹಮ್ಮಿಕೊಳ್ಳಲಾಗಿದ್ದು, ಇದರಲ್ಲಿ ಸ್ಕಿಲ್ಡ್ ಟೈಲರಿಂಗ್, ಉಡುಪು ತಯಾರಿಕೆ, ಎಂಬ್ರಾಯ್ಡರಿ ಮತ್ತು ಆಧುನಿಕ ಫ್ಯಾಷನ್ಟ್ರೆಂಡ್ಸ್ ತರಬೇತಿ ನೀಡಲಾಗುತ್ತದೆ. 

 

"ಅತ್ಯಾಧುನಿಕ ಘಟಕದಲ್ಲಿ ತರಬೇತಿ"

"ನಾನು ಕೆಲವು ಸಮಯದ ಹಿಂದೆ ಆಸ್ಟ್ರೇಲಿಯಾದ ಸಿಡ್ನಿಗೆ ಹೋಗಿದ್ದೆ. ಅಲ್ಲಿ ಡಾಕ್ಟರ್, ಇಂಜಿನಿಯರ್ಗಳಿಗಿಂತ ಕೌಶಲ್ಯಾಧರಿತ ತಾಂತ್ರಿಕ ಕೆಲಸಗಾರರಿಗೆ ಅತ್ಯಂತ ಹೆಚ್ಚಿನ ವೇತನ ಮತ್ತು ಗೌರವವಿದೆ. ನಮ್ಮ ಸಂಸ್ಥೆಯಲ್ಲೇ ವರ್ಷಕ್ಕೆ 100 ಮಂದಿಗೆ ಉದ್ಯೋಗ ನೀಡುತ್ತೇವೆ. ನಾನೂ ಬಡತನದ ಹಿನ್ನೆಲೆಯಿಂದ ಬಂದವನಾದ್ದರಿಂದ, ನಮ್ಮ ಕಲ್ಯಾಣ ಕರ್ನಾಟಕ ಭಾಗದ ಗ್ರಾಮೀಣ ಯುವಜನತೆ ಉಚಿತ ಯೋಜನೆಯ ಸದುಪಯೋಗ ಪಡಿಸಿಕೊಂಡು ಜಾಗತಿಕವಾಗಿ ಬೆಳೆಯಬೇಕು ಎಂಬುದೇ ನನ್ನ ಆಸೆ. ಅದಕ್ಕಾಗಿ ಅತ್ಯಾಧುನಿಕ ಘಟಕ ರೂಸಿದ್ದೇವೆ".

- ಡಾ. ರಾಮಕೃಷ್ಣ ಆಚಾರ್ (ಮುಖ್ಯಸ್ಥರು, ಎಸ್ಕೆಎಫ್ಎಲಿಕ್ಸರ್ ಸಂಸ್ಥೆ) 

ಉಚಿತ ಪ್ರವೇಶಾತಿಗಾಗಿ ಇಂದೇ ಸಂಪರ್ಕಿಸಿ:

ಆಸಕ್ತ ವಿದ್ಯಾರ್ಥಿಗಳು ಮತ್ತು ಪೋಷಕರು ಉಚಿತ ಸೀಟುಗಳ ನೋಂದಣಿಗಾಗಿ ಕೆಳಗಿನ ವಿವರಗಳನ್ನು ಬಳಸಬಹುದು: 

 

ಮೊಬೈಲ್ ಸಂಖ್ಯೆ: 91874 92550, 72045 70741

ಅಧಿಕೃತ ವೆಬ್ಸೈಟ್: www.skftrainingcentre.com 

ವಿಳಾಸ: ಎಸ್ಕೆಎಫ್ ಇಂಡಸ್ಟ್ರಿಯಲ್ ಟ್ರೇನಿಂಗ್ ಸೆಂಟರ್, ಯಡಾಡಿ-ಮತ್ಯಾಡಿ ಅಂಚೆ, ಕುಂದಾಪುರ ತಾಲೂಕು, ಉಡುಪಿ ಜಿಲ್ಲೆ.

Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಯಶಸ್ವಿಯಾಗಿ ನಡೆದ ಜಿಂದಾಲ್ ಸ್ಟೀಲ್ ಸಿಟಿ ರನ್ 2026ಹವಾಮಾನ-ಸಹನಶೀಲ ಕೃಷಿ ಮತ್ತು ಶಾಸನಾತ್ಮಕ ಸಾಮರ್ಥ್ಯ ನಿರ್ಮಾಣ ಕುರಿತು ಎನ್ಎಫ್ಪಿಆರ್ಸಿ ಕಾರ್ಯಾಗಾರ ಆಯೋಜನೆಕೊಪ್ಪಳದಲ್ಲಿ ಆ.04ಕ್ಕೆ ಬೃಹತ್ ಕಟ್ಟಡ ಕಾರ್ಮಿಕರ ಪ್ರತಿಭಟನಾ ಮೆರವಣಿಗೆ : ಪೋಸ್ಟರ್ ಬಿಡುಗಡೆ'ಕಸಾಪ ಘನತೆ, ಗೌರವ ಎತ್ತಿ ಹಿಡಿದು ಪರಂಪರೆ ಉಳಿಸೋಣ: ಜಾಣಗೆರೆಸಾಮಾಜಿಕ ಬದಲಾವಣೆಗೆ ಪತ್ರಿಕೆಗಳ ಪಾತ್ರ ಮಹತ್ವದ್ದು - ಮೊಹಮ್ಮದ್ ಜುಬೇರಗೆಳೆತನ: ಮಾನವೀಯತೆಯ ಮಹಾಕಾವ್ಯಕೊತ್ತಲಚಿಂತ ಗ್ರಾಮದಲ್ಲಿ ಮಳೆಗಾಗಿ ಅಖಂಡ ಭಜನಾ ಸಪ್ತಾಹಕಳಪೆ ಆಹಾರ ಮಾರಾಟ: ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಸಾರ್ವಜನಿಕರ ಆಕ್ರೋಶಸಮಾಜಮುಖಿ ವೃತ್ತಿಪರರನ್ನಾಗಿ ರೂಪಿಸುವುದು ಶಿಕ್ಷಣದ ನಿಜವಾದ ಉದ್ದೇಶ1.40 ಕೋಟಿ ವೆಚ್ಚದ ರಸ್ತೆ–ಚರಂಡಿ ಕಾಮಗಾರಿಗಳಿಗೆ ಚಾಲನೆ