ಬಳ್ಳಾರಿ : ನಗರದ ಕಂಟೋನ್ಮೆಂಟ್ ಬಳಿ ಜನಾರ್ಧನ ರೆಡ್ಡಿ ಅವರ ಲೇಔಟ್ ನಲ್ಲಿ G square ಕಾಪೌಂಡ್ ನಲ್ಲಿ ಜನಾರ್ಧನ ರೆಡ್ಡಿ ಅವರ ಮಾಡೆಲ್ ಹೌಸ್ ಗೆ ಯಾರೋ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ.
https://www.instagram.com/p/DT2x6ppk0of/
ಶ್ರೀರಾಮುಲು ಹಾಗೂ ಜನಾರ್ದನ ರೆಡ್ಡಿ ಒಡೆತನದ ಶ್ರೀಮತಿ ರುಕ್ಮಿಣಮ್ಮ ಚಂಗರೆಡ್ಡಿ ಬಡಾವಣೆಯಲ್ಲಿರುವ ಜನಾರ್ದನ ರೆಡ್ಡಿ ಅವರ ಮಾದರಿ ಮನೆಗೆ (Model House) ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ. ಮಾಹಿತಿ ತಿಳಿದ ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ.
https://youtu.be/hU4WkAZ9Vx8
ಈ ಕುರಿತು ಜನಾರ್ದನ ರೆಡ್ಡಿ ಅವರು ಬಳ್ಳಾರಿ ಎಸ್ಪಿಯವರಿಂದ ಮಾಹಿತಿ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಅಲ್ಲದೇ ಮಾಜಿ ಶಾಸಕ ಗಾಲಿ ಸೋಮಶೇಖರರೆಡ್ಡಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.