LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿ : ತಿಪ್ಪೇಸ್ವಾಮಿ

ನಾಯಕನಹಟ್ಟಿ :  ಶಿಕ್ಷಕರು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಸಿದ್ದರಿದ್ದಾರೆ. ಆದ್ದರಿಂದ ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಬೇಕೆಂದು ಮುಖ್ಯಶಿಕ್ಷಕ ತಿಪ್ಪೇಸ್ವಾಮಿ ಬಿ. ಹೇಳಿದರು.

 

ಪಟ್ಟಣದ ಜಾಗನೂರಹಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ನಿಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿ ಎಂದು ವಿದ್ಯಾರ್ಥಿಗಳು ಮುಖ್ಯ ರಸ್ತೆಗಳಲ್ಲಿ ಜಾಗೃತಿ ಮೂಡಿಸಿದರು. 2026-27ನೇ ಸಾಲಿನಲ್ಲಿ 4-5 ವರ್ಷದ ಮಕ್ಕಳಿಗೆ ಎಲ್.ಕೆ.ಜಿ. ಅತೀ ಶೀಘ್ರÀ್ರದಲ್ಲಿಯೇ ಪ್ರಾರಂಭವಾಗಲಿದೆ ಎಂದು ತಿಳಿಸಿದರು. ನಮ್ಮ ಶಾಲೆಯಲ್ಲಿ ಮಕ್ಕಳಿಗೆ ಉಚಿತವಾಗಿ ದೊರೆಯುವ ಸೌಲಭ್ಯಗಳು ಇವೆ. ,ಉಚಿತ ಪ್ರವೇಶ ಹಾಗೂ ದಾಖಲಾತಿ, ಕನ್ನಡ ಮತ್ತು ಇಂಗ್ಲೀಷ್ ಮಾಧ್ಯಮದಲ್ಲಿ ಶಿಕ್ಷಣ, ನುರಿತ ಹಾಗೂ ಅನುಭವಿ ಶಿಕ್ಷಕರು, ಸುಸಜ್ಜಿತ ತರಗತಿ ಕೊಠಡಿಗಳು, ಶೌಚಾಲಯ ಸೌಲಭ್ಯ, ಉಚಿತ ಸಮವಸ್ತç, ಉಚಿತ ಪಠ್ಯಪುಸ್ತಕ, ಮಧ್ಯಾಹ್ನದ ಬಿಸಿ ಊಟ ಯೋಜನೆ, ಕ್ಷೀರಭಾಗ್ಯ ಮೊಟ್ಟೆ, ಬಾಳೆಹಣ್ಣು, ರಾಗಿ ಮಾಲ್ಟ್, ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ಸೌಲಭ್ಯಗಳು, ಸ್ಪೋಕನ್ ಇಂಗ್ಲೀಷ್ ತರಬೇತಿ, ವೈದ್ಯಕೀಯ ತಪಾಸಣೆ, ಗ್ರಂಥಾಲಯ ಮತ್ತು ಪ್ರಯೋಗಾಲಯ ಸೌಲಭ್ಯ, ರೇಡಿಯೋ ಪಾಠಗಳು, ಸುಸಜ್ಜಿತ ಕೊಠಡಿ ಮತ್ತು ಬೋಜನಾಲಯ ವ್ಯವಸ್ಥೆ, ಕಂಪ್ಯೂಟರ್ ಆಧಾರಿತ ಶಿಕ್ಷಣ, ಪರಿಹಾರ ಬೋಧನೆ, ಪ್ರತಿಭಾ ಕಾರಂಜಿ, ಕ್ರೀಡಾಕೂಟ, ಇನಸ್ಪೆöÊರ್ ಅವಾರ್ಡ್ ಯಾವುದೇ ಶುಲ್ಕವಿಲ್ಲ ಸಂಪೂರ್ಣವಾಗಿ ಉಚಿತ ಶಿಕ್ಷಣ ನೀಡುತ್ತೇವೆ ಎಂದರು.

 

ವಿದ್ಯಾರ್ಥಿ/ವಿದ್ಯಾರ್ಥಿನಿಯರು ಸರ್ಕಾರಿ ಶಾಲೆಗೆ ಸರಿಸಾಟಿ ಇಲ್ಲಿಂದಲೇ ಶುರುವಾಗಲಿ ಮಗವಿನ ಅಕ್ಷರ ಓಟ ಮನೆಯ ಹತ್ತಿರ ಸರ್ಕಾರಿ ಶಾಲೆಯ ಪುಟಾಣಿ ಮಕ್ಕಳ ಕಲಿಕೆಯ ಪಾಠಶಾಲೆ. ಉಚಿತ ಎಲ್.ಕೆ.ಜಿ. ಮತ್ತು ಯೂ.ಕೆ.ಜಿ. ಶಿಕ್ಷಣ ನಿಮ್ಮ ಮಗುವಿನ ಭವಿಷ್ಯಕ್ಕೆ ರಕ್ಷಣೆ ನಮ್ಮೂರ ಶಾಲೆ ನಮ್ಮ ಹೆಮ್ಮೆ, ಸರ್ಕಾರಿ ಶಾಲೆಯಲ್ಲಿ ಕಲಿಕೆಯೆಂದರೆ ಗಮ್ಮತ್ತು ಸುಮ್ಮನೆ. ಖಾಸಗಿ ಶಾಲೆಗಳಿಗಿಂತ ನಮ್ಮ ಸರ್ಕಾರಿ ಶಾಲೆಗಳಿಗೆ ಸರಿಸಾಟಿ ಇಲ್ಲ. ಇಲ್ಲಿ ಸಿಗಲಿದೆ ಗುಣಮಟ್ಟದ ಶಿಕ್ಷಣದ ಭೇಟಿ  ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿ ಗುಣಮಟ್ಟದ ಶಿಕ್ಷಣ ನೀಡಿ ಹರೆಸಿ ಎಂದು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಘೋಷಣೆ ಕೂಗುವುದರ ಮೂಲಕ ಜಾಗೃತಿ ಮೂಡಿಸಿದರು.

 

ಈ ಸಂದರ್ಭದಲ್ಲಿ ಉಪಸ್ಥಿತರಾದ ಶಿವಮ್ಮ ಟಿ. ಸಹಶಿಕ್ಷಕಿ., ಸುಬ್ಬಲಕ್ಷಿö್ಮÃ ಕೆ., ಕುಬೇರಪ್ಪ ಕೆ. ದೈ.ಶಿ., ಬಸವರಾಜ್ ಎನ್. ಅ.ಶಿ., ಎಸ್.ಡಿ.ಎಂ.ಸಿ. ಅಧ್ಯಕ್ಷರು, ಸದಸ್ಯರು, ಜಾಗನೂರಹಟ್ಟಿ ಗ್ರಾಮಸ್ಥರು, ದೇವರಾಜ್ ಜಿ.ಪಿ. ಕುಮಾರ್. ಜಿ.ಪಿ. ಸುರೇಶ್, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಹಾಗೂ ಇನ್ನಿತರರು ಇದ್ದರು.
Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST