ಬೆಂಗಳೂರು : ವಿ-ವೈಶ್ಯ ಸಂಸ್ಥೆಯಿಂದ ಇಂದಿನಿಂದ ಜು. 20ರ ವರೆಗೆ ವಿ-ಎಕ್ಸಪೋ ಮೆಗಾ ಪ್ರದರ್ಶನ ಮೇಳ ಅರಮನೆ ಮೈದಾನ ಕಿಂಗ್ಸ್ ಪ್ರಿನಸ್ಸ್ ಹಾಲ್ ನಲ್ಲಿ ನಡೆಯುತ್ತಿದೆ.
ಮೂರು ದಿನಗಳ ಮೇಳಕ್ಕೆ ಮಾಜಿ ಶಾಸಕರು, ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷರಾದ ಸೌಮ್ಯರೆಡ್ಡಿ, ವಿ-ವೈಶ್ಯ ಸಂಸ್ಥೆಯ ಸಂಸ್ಥಾಪಕರಾದ ಅನಿಲ್ ಗುಪ್ತಾ ಉದ್ಘಾಟಿಸಿದರು.

ಸೌಮ್ಯರೆಡ್ಡಿ ಮಾತನಾಡಿ, ವಿ-ಎಕ್ಸಪೋ ಪ್ರದರ್ಶನ ಮೇಳ ಮಹಿಳೆಯರಿಗೆ ಹೆಚ್ಚು ಅನುಕೂಲವಾಗಲಿದೆ, ಇಲ್ಲಿ ಮಹಿಳೆಯರಿಗೆ ಫ್ಯಾಶನ್ ವಸ್ತ್ರಗಳು, ಆಭರಣ, ಜ್ಯುವೆಲರಿ, ತಿಂಡಿ ಮೇಳ ಮತ್ತು ಅಲಂಕಾರಿಕ ಸಾಮಾಗ್ರಿಗಳು ಅತ್ಯಂತ ಕಡಿಮೆ ಬೆಲೆಗೆ ಒಂದೇ ವೇದಿಕೆಯಲ್ಲಿ ಸಿಗಲಿದೆ. ಮಹಿಳೆಯರು ಸ್ವಾವಲಂಬಿಗಳಾಗುತ್ತಿದ್ದು, ತಮ್ಮ ಕಾಲ ಮೇಲೆ ನಿಲ್ಲುವ ಶಕ್ತಿ ಹೊಂದಿದ್ದಾರೆ. ತನ್ನ ಮನೆ ನಿರ್ವಹಣೆ, ಅಲಂಕಾರ ಮಾಡುವ ಮತ್ತು ಕುಟುಂಬ ನಿರ್ವಹಣೆ ನಿರ್ವಹಣೆ ಹೇಗೆ ಮಾಡಬೇಕು ಎಂಬುದು ತಿಳಿದಿದೆ ಎಂದು ಹೇಳಿದರು.
ವಿ-ವೈಶ್ಯ ಸಂಸ್ಥೆಯ ಸಂಸ್ಥಾಪಕ ಅನಿಲ್ ಗುಪ್ತಾ ಮಾತನಾಡಿ, ಜನರಿಗೋಸ್ಕರ ಈ ಮೇಗಾ ಎಕ್ಸಪೋ ಅಯೋಜಿಸಲಾಗಿದೆ, ಕುಟುಂಬ ಸಮೇತರಾಗಿ ಬಂದು ಇಲ್ಲಿ ದೇಶಿಯ ಉತ್ಪನ್ನಗಳ ಮಾರಾಟ, ಪ್ರದರ್ಶನ ಏರ್ಪಡಿಸಲಾಗಿದೆ. ಸಾರ್ವಜನಿಕರಿಗೆ ಉಚಿತ ಪ್ರವೇಶವಿದೆ. ಎಕ್ಸಪೋ ದಲ್ಲಿ 120ಮಳಿಗೆಗಳಿವೆ. ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಫ್ಯಾಶನ್ ಸಹ ಏರ್ಪಡಿಸಲಾಗಿದೆ ಎಂದು ಹೇಳಿದರು.

ವಿ-ವೈಶ್ಯ ಸಂಸ್ಥೆಯ ಗಣೇಶ್, ಕೆ.ಎಸ್.ಸಂಜಯ್, ಸಂತೋಷ್ ಶೆಟ್ಟಿ, ಮತ್ತು ಮೂರ್ತಿ.ಟಿ.ಎನ್., ಉನ್ನತಿ ಸುಪ್ರೀತ್, ಸಂಘರ್ಷ್ ಕೆ.ಎಸ್., ಅಭಿಜ್ಞಾ ಉಪಸ್ಥಿತರಿದ್ದರು.