LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ರೈತರಿಗೆ ಸೈಕಲ್ ಕುಂಟೆ ಪರಿಕರ ವಿತರಣೆ

ತುಮಕೂರು : ತುಮಕೂರು ತಾಲ್ಲೂಕು ಅರಕೆರೆ ರವೀಶ್ ರವರ ಹುಟ್ಟುಹಬ್ಬದ ಅಂಗವಾಗಿ ರೈತರಿಗೆ ಕೃಷಿಗೆ ಅವಶ್ಯಕತೆ ಇರುವ ಸೈಕಲ್ ಕುಂಟೆ ಪರಿಕರ ಮತ್ತು ಹಣ್ಣಿನ ಗಿಡಗಳ ವಿತರಿಸಲಾಯಿತು

ಕಾರ್ಯಕ್ರಮವನ್ನು ಶ್ರೀ ಬೆಳ್ಳಾವಿ ಶ್ರೀ  ಕಾರದೇಶ್ವರ ಮಠದಲ್ಲಿ  ಆಯೋಜಿಸಲಾಗಿದ್ದು ಭಾರತೀಯ ಕೃಷಿಕ ಸಮಾಜದ ವತಿಯಿಂದ ಸರಳವಾಗಿ ಅರಕೆರೆ ರವೀಶ್ ರವರ ಹುಟ್ಟುಹಬ್ಬವನ್ನು ಆಚರಿಸಲಾಯಿತು

ಶ್ರೀ ಕಾರದ ವೀರಬಸವ ಮಹಾಸ್ವಾಮಿಗಳು ಆಶೀರ್ವಚನ ನೀಡಿ ಮಾತನಾಡಿ,  ಅರಕೆರೆ ರವೀಶ್ ರವರು ನಮ್ಮ ಜಿಲ್ಲೆಯ ಒಂದು ಮಾಣಿಕ್ಯವಿದ್ದಂತೆ ಬಡಬಗ್ಗರಿಗೆ ಶಿಕ್ಷಣದ ವಿಚಾರವಾಗಿ ರೈತರ ಪರವಾಗಿ ನಿಂತು ಸಹಕಾರ ನೀಡುತ್ತಿರುವುದು ಬಹಳ ಸಂತೋಷದ ವಿಷಯ ಎಂದು ತಿಳಿಸಿದರು.



ಅರಕೆರೆ ರವೀಶ್ ರವರು ಮಾತನಾಡಿ  ಸಾವಯವ ಕೃಷಿ ಮಾಡಿ ಯಾವುದೇ ರಾಸಾಯನಿಕ ಗೊಬ್ಬರ ಬಳಸದೆ ಕೃಷಿಯನ್ನು ಮಾಡಿ ದೇಶಕ್ಕೆ ಅನ್ನ ನೀಡುವಂತೆ ಸಲಹೆ ನೀಡಿದರು. ಕೊಟ್ಟಿಗೆ ಗೊಬ್ಬರ ಹಸಿರೆಲೆ ಬಳಕೆ ಹೆಚ್ಚಿಸಿ ಭೂಮಿಗೆ ಸೇರಿಸಿದ್ದಲ್ಲಿ ರಾಸಾಯನಿಕ ಮುಕ್ತ ಮಾಡಬಹುದು ಇದರಿಂದ ರೈತರ ಆದಾಯ ದ್ವಿಗುಣ ಮಾಡಬಹುದು ಹೊಲ ತೋಟಗಳಲ್ಲಿ ಕೀಟನಾಶಕ ರಾಸಾಯನಿಕ ಗೊಬ್ಬರವನ್ನು ಬಳಸುವುದು ನಿಲ್ಲಿಸಬೇಕು ಎಂದು ರೈತರಿಗೆ ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಭಾರತೀಯ ಕೃಷಿಕ ಸಮಾಜದ ಕೋಡಿಹಳ್ಳಿ  ಜಗದೀಶ್ ರವರು ಮಾತನಾಡಿದರು. ಅರಕೆರೆ ರವೀಶ್ ರವರ ಹುಟ್ಟುಹಬ್ಬಕ್ಕೆ ಸುಮಾರು 25 ರಿಂದ 30 ಜನ ರೈತರುಗಳಿಗೆ  ಸೈಕಲ್ ಕುಂಟೆ ಪರಿಕರವನ್ನು ಮತ್ತು ಹಣ್ಣಿನ ಗಿಡಗಳನ್ನು ಉಚಿತವಾಗಿ ವಿತರಿಸಿದ್ದಾರೆ ಅದನ್ನ ಸರಿಯಾಗಿ ಸದ್ಬಳಕೆ ಆಗಬೇಕು ಎಂದು ರೈತರಿಗೆ ಮನವರಿಕೆ ಮಾಡಿದರು.

ಪ್ರಪಂಚದ ಮೇಲೆ ಹಣವಂತರೆಲ್ಲ ಗುಣವಂತರಾಗಲು ಸಾಧ್ಯವಾಗುವುದಿಲ್ಲ  ಆದರೆ ಅರಕೆರೆ ರವೀಶ್ ರವರು ಹಣವಂತನು ಹೌದು ಗುಣವಂತನು ಹೌದು ರೈತರಿಗೆ ಸಾವಯವ ಕೃಷಿ ಮಾಡಲು ಅತಿ ಹೆಚ್ಚು ಪ್ರೋತ್ಸಾಹ ನೀಡುತ್ತಿರುವುದು ಸಂತೋಷ ತಂದಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಭಾರತೀಯ ಕೃಷಿಕ ಸಮಾಜದ ಉಪಾಧ್ಯಕ್ಷ ರಾಜಣ್ಣ, ಶಿವಕುಮಾರ್ ಗೌಡಿಹಳ್ಳಿ ಸಿದ್ದಪ್ಪ, ಅರೆಯೂರು ಶ್ರೀನಿವಾಸ್ ಮೂರ್ತಿ ಹಾಗೂ ಸ್ಥಳೀಯ ರೈತ ಮುಖಂಡರು ಕಾರ್ಯಕರ್ತರು ಭಾಗವಹಿಸಿದ್ದರು. ಕೃಷಿಕ ಸಮಾಜದ ಪ್ರಧಾನ ಕಾರ್ಯದರ್ಶಿ ಆನಂದ್ ಬಿ ಎಂ ಎಲ್ಲರಿಗೂ ವಂದಿಸಿದರು.
Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST