ಬೆಂಗಳೂರು : ಪೇಸ್ ಸ್ಪೋರ್ಟ್ಸ್ ಅರೆನಾ ಅಕಾಡೆಮಿ ಮತ್ತು ಬೆಂಗಳೂರು ಪ್ರೆಸ್ ಕ್ಲಬ್ ಸೆ. 19 ಮತ್ತು 20 ರಂದು ಎರಡು ದಿನಗಳ ಕಾಲ ದಸರಾ ಕಪ್ – 2025 ಬ್ಯಾಡ್ಮಿಂಟನ್ ಟೂರ್ನಿ ಏರ್ಪಡಿಸಿದೆ.
ದೀಪಾಂಜಲಿ ನಗರದ ಪ್ರಮೋದ್ ಲೇಔಟ್ ನಲ್ಲಿರುವ ಪೇಸ್ ಸ್ಪೋರ್ಟ್ಸ್ ಅರೆನಾ ಅಕಾಡೆಮಿಯ ಬ್ಯಾಡ್ಮಿಂಟನ್ ಕೋರ್ಟ್ ನಲ್ಲಿ ಪಂದ್ಯಾವಳಿಗಳು ನಡೆಯಲಿದ್ದು, 100 ಕ್ಕೂ ಅಧಿಕ ಮಂದಿ ಮಾಧ್ಯಮ ಮತ್ತು 30ಕ್ಕೂ ಹೆಚ್ಚು ಸಿನೆಮಾ ರಂಗದ ಪ್ರಮುಖರು ಕ್ರೀಡಾ ಕೂಟದಲ್ಲಿ ಭಾಗಿಯಾಗಲಿದ್ದಾರೆ.

ಸಿಂಗಲ್ಸ್, ಡಬಲ್ಸ್ , ಮಿಶ್ರ ಡಬಲ್ಸ್ ನಲ್ಲಿ ಆಟಗಾರರು ತಮ್ಮ ಸಾಮರ್ಥ್ಯ ಪ್ರದರ್ಶಿಸಲಿದ್ದಾರೆ. ಪ್ರೆಸ್ ಕ್ಲಬ್ ಅಧ್ಯಕ್ಷ ಆರ್. ಶ್ರೀಧರ್, ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಬೆಳ್ಳಿ ತಟ್ಟೆ ಶುಕ್ರವಾರ ಬೆಳಿಗ್ಗೆ ಕ್ರೀಡಾ ಕೂಟಕ್ಕೆ ಚಾಲನೆ ನೀಡಲಿದ್ದಾರೆ. ವಿಜೇತ ತಂಡಗಳಿಗೆ ಆಕರ್ಷಕ ಬಹುಮಾನ ವಿತರಿಸಲಾಗುವುದು ಎಂದು ಪ್ರೆಸ್ ಕ್ಲಬ್ ನ ಕ್ರೀಡಾ ಸಮಿತಿ ಅಧ್ಯಕ್ಷ ಮಂಜುನಾಥ್ ಮಾಹಿತಿ ನೀಡಿದ್ದಾರೆ.