LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ರೈತರ ಬಂಧನಕ್ಕೆ ಸಿಪಿಐಎಂ ಆಗ್ರಹ

ಬಳ್ಳಾರಿ: ಸಂಯುಕ್ತ ಹೋರಾಟ ಕರ್ನಾಟಕ ನೇತೃತ್ವದಲ್ಲಿ ದೇವನಹಳ್ಳಿ ಯಲ್ಲಿ ನಡೆಯುತ್ತಿದ್ದ ಬಲವಂತದ ಭೂಸ್ವಾಧೀನ ವಿರೋಧಿ ಹೋರಾಟಗಾರರನ್ನು ಬಂಧಿಸಿದ ಪೋಲಿಸರ ದೌರ್ಜನ್ಯ ಕ್ಕೆ ಸಿ.ಪಿ.ಐ.(ಎಂ) ಖಂಡಿಸುತ್ತದೆ ಎಂದು ಸಿಪಿಐಎಂ  ಮುಖಂಡರು ಆಗ್ರಹಿಸಿದರು.

ಕಳೆದ 1177 ದಿನಗಳಿಂದ ಶಾಂತಿಯುತವಾಗಿ ಬಲವಂತದ ಭೂಸ್ವಾಧೀನದ ವಿರುದ್ಧ ದೇವನಹಳ್ಳಿಯ 13 ಗ್ರಾಮಗಳ ರೈತರು ನಡೆಸಿದ ವಿವಿಧ ಮಾದರಿಯ ಹೋರಾಟಕ್ಕೆ ಸರಕಾರ ಕಿವಿಕೊಡದ ಕಾರಣದಿಂದಾಗಿ ದೇವನಹಳ್ಳಿ ಸಂತೇ ಮೈದಾನದಲ್ಲಿ ಪ್ರತಿಭಟನೆ ನಡೆಸಲಾಗುತ್ತಿತ್ತು. ರೈತರ ಪ್ರತಿಭಟನೆಗೆ ಬೆಂಬಲ ಸೂಚಿಸಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಹತ್ತಾರು, ಸಂಘಟನೆಗಳ ಸಾವಿರಾರು ಜನ ಸೇರಿದ್ದರು.



ಅನಿರ್ದಿಷ್ಟ ಕಾಲದ ಪ್ರತಿಭಟನೆಯ ಕರೆಗೆ ಭೂಸ್ವಾಧೀನ ವಿರೋಧಿ ಹೋರಾಟ ವೇದಿಕೆಯನ್ನು ಬೆಂಬಲಿಸಿ ಸಂಯುಕ್ತ ಹೋರಾಟ ಕರ್ನಾಟಕ ಕರೆ ನೀಡಿದ ಹಿನ್ನೆಲೆಯಲ್ಲಿ ರಾಜ್ಯದ ಪ್ರಮುಖ ಕಾರ್ಮಿಕ ಸಂಘಟನೆಗಳ ನಾಯಕರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡರು.

ಸರಕಾರದಿಂದ ಭೂ ಸ್ವಾಧೀನದ ಆದೇಶವನ್ನು ಹಿಂತೆಗದುಕೊಳ್ಳುವ ವರೆಗೂ ಪ್ರತಿಭಟನೆ ಮುಂದುವರೆಸುವ ತೀರ್ಮಾನಕ್ಕೆ ಬರಲಾಗಿತ್ತು. ಇಡೀ ದಿನ ಶಾಂತಿಯುತವಾಗಿ ನಡೆದ ಹೋರಾಟದ ವೇದಿಕೆಗೆ ಸಂಜೆಯ ವೇಳೆಗೆ ಏಕಾಏಕಿ ನುಗ್ಗಿದ ಪೊಲೀಸರು 5 ಘಂಟೆಯ ನಂತರ ಪ್ರತಿಭಟನೆಗೆ ಅವಕಾಶವಿಲ್ಲ, ಪಟ್ಟಣದಲ್ಲಿ ಪ್ರತಿಭಟನೆ ಮಾಡುವ ಹಾಗಿಲ್ಲ ಫ್ರೀಡಂ ಪಾರ್ಕ್ ನಲ್ಲಿ ಹೋರಾಟ ಮಾಡಿರೆಂದು ಹೇಳಿ ವೇದಿಕೆಯಲ್ಲಿ ಇರುವವರನ್ನು ಎಳೆದಾಡಿ ಬಂಧಿಸಿದ ರೀತಿ ಖಂಡನೀಯವಾಗಿದೆ.



ಸರಕಾರದ ರೈತ ವಿರೋಧಿ ಸಂವಿಧಾನದ ಹಕ್ಕುಗಳ ವಿರೋಧಿ ಅನ್ನಕ್ಕೆ ತತ್ವಾರಮಾಡುವ ಭೂ ಸ್ವಾಧೀನ ನೀತಿಗಳನ್ನು ಯಾವುದೇ ಕಾರಣಕ್ಕೂ ಮುಂದುವರೆಸಬಾರದೆಂದು ಸಿ.ಪಿ.ಐ.(ಎಂ) ಪಕ್ಷ ಒತ್ತಾಯಿಸುತ್ತದೆ.

ನಮ್ಮ ಪಕ್ಷದ ಹಲವಾರು ಮುಖಂಡರುಗಳು ಮತ್ತು ಸಾಮೂಹಿಕ ಸಂಘಟನೆಗಳ ಕಾರ್ಯಕರ್ತರನ್ನು ಬಂಧಿಸಲಾಗಿದೆ. ಇತರ ಸಂಘಟನೆಗಳ ಮುಖಂಡರನ್ನು ಕಾರ್ಯಕರ್ತರನ್ನೂ ಬಂಧಿಸಿದ ಕ್ರಮವನ್ನು ವಿರೋಧಿಸಿ ಇಂದು ಎಲ್ಲ ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆಸಲಾಗಿದೆ ಎಂದು ಮುಖಂಡರು ತಿಳಿಸಿದರು.
Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST