ಈ ಸಂದರ್ಭದಲ್ಲಿ ಕಲಾಧಾಮ ಕಥಕ್ ನೃತ್ಯ ಶಾಲೆಯ ಗುರುಗಳಾದ ನೂಪುರ್ ಭಾರ್ಗವ ಅವರ ಶಿಷ್ಯರಾದ ಮೌಸಂ ಮೋಹಂತಿ ಮತ್ತು ಶಬ್ನಮ್ ಛತ್ರಿ ರವರುಗಳು ಕಥಕ್ ನೃತ್ಯ ಪ್ರದರ್ಶಿಸಿದರು.

ಫ್ಯಾಶನ್ ನೃತ್ಯ ಶಾಲೆಯ ಲಕ್ಷ್ಮೀಶ್ರೀ ಅವರ ಶಿಷ್ಯರುಗಳಾದ ಶಿವಾನ್ ಶಿಖ, ಶಾರಿಕ, ಶ್ರೇಯ ರವರುಗಳು ಕೃಷ್ಣ ಲೀಲ ವಿನೋದ ಸಂಬಂಧಿತ ನೃತ್ಯ ಪ್ರದರ್ಶನ ನೀಡಿದರು. ಈ ಸಂದರ್ಭದಲ್ಲಿ ವಿಶೇಷವಾಗಿ ಪುಟ್ಟ ಮಕ್ಕಳಾದ ಕಾಶ್ವಿ ಓಜಶ್ವಿ ಮತ್ತು..... ಕೃಷ್ಣ ರಾಧೆ ವೇಷಭೂಷಣಧಾರಿಗಳಾಗಿ ಕೃಷ್ಣಾಷ್ಟಮಿಯನ್ನು ಬಹಳ ಸಂತಸದಿಂದ ಆಚರಿಸಿದರು.
ಕಾರ್ಯಕ್ರಮದಲ್ಲಿ ನಟ ನಿರ್ಮಾಪಕ ಗಂಡಸಿ ಸದಾನಂದ ಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.