ಡಯಾಬಿಟಿಸ್ ಬೆಸ್ಟಿ ಬೇಸಿಗೆ ಶಿಬಿರವು ಇಂದು ಇಂದಿರಾ ಗಾಂಧಿ ಇನ್ಸ್ಟಿಟ್ಯೂಟ್ ಆಫ್ ಚೈಲ್ಡ್ ಹೆಲ್ತ್ (ಐಜಿಐಸಿಎಚ್) ನಲ್ಲಿ ನಡೆಯಿತು. ಈ ಶಿಬಿರವು, ಮಕ್ಕಳು ತಮ್ಮ ಆರೋಗ್ಯವನ್ನು ನಿಭಾಯಿಸುತ್ತಾ, ಯಾವುದೇ ನಿರ್ಬಂಧಗಳಿಲ್ಲದೆ ಬೇಸಿಗೆ ಶಿಬಿರದ ಸಂಪೂರ್ಣ ಅನುಭವವನ್ನು ಪಡೆಯಲು ಸಹಾಯ ಮಾಡುವ ಉದ್ದೇಶ ಹೊಂದಿತ್ತು.

ಸುಮಾರು 130–140 ಜನರು, ಅವರಲ್ಲಿ 50–60 ಮಕ್ಕಳು, ಪೋಷಕರೊಂದಿಗೆ ಶಿಬಿರದಲ್ಲಿ ಭಾಗಿಯಾಗಿದ್ದರು. ಶಿಬಿರದ ಕಾರ್ಯಕ್ರಮವನ್ನು 30% ಆರೋಗ್ಯ ಶಿಕ್ಷಣ ಮತ್ತು 70% ಮನರಂಜನಾ ಚಟುವಟಿಕೆಗಳನ್ನಾಗಿ ವಿನ್ಯಾಸಗೊಳಿಸಲಾಗಿದ್ದು , ಮಕ್ಕಳು ಕಲಿಕೆಯ ಜೊತೆಗೆ ಆಟಕ್ಕೂ ಸಹ ಸಮಯ ವಿನಿಯೋಗಿಸುವ ಉದ್ದೇಶ ಇತ್ತು. ಮಕ್ಕಳು ಸ್ನೇಹಿತರೊಂದಿಗೆ ತಮ್ಮ ರಕ್ತದ ಸಕ್ಕರೆಯ ಪ್ರಮಾಣವನ್ನು ಪರೀಕ್ಷಿಸುವುದರೊಂದಿಗೆ ಇನ್ಸುಲಿನ್ ಸಹ ತೆಗೆದುಕೊಳ್ಳುವುದನ್ನ ಕಲಿತರು.