LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ನವೆಂಬರ್ 9 ರ ಬಿಯುಡಬ್ಲ್ಯುಜೆ ಚುನಾವಣೆ: ಸುಗಮ ಮತದಾನಕ್ಕೆ ಸಕಲ ಸಿದ್ಧತೆ

ಬೆಂಗಳೂರು : ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಂಗ ಸಂಸ್ಥೆ ಬೆಂಗಳೂರು ನಗರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ನವೆಂಬರ್ 9ರಂದು ನಡೆಯಲಿರುವ ಚುನಾವಣೆಗೆ ಸಿದ್ಧತೆಗಳು ಬಿರುಸುಗೊಂಡಿದೆ. ಕಣದಲ್ಲಿ 41 ಅಭ್ಯರ್ಥಿಗಳಿದ್ದು, ಚುನಾವಣಾ ಪ್ರಕ್ರಿಯೆ ನಿರ್ಣಾಯಕ ಹಂತದಲ್ಲಿದೆ.

 

ಸುಗಮವಾಗಿ ಚುನಾವಣೆ ನಡೆಸುವ ಸಂಬಂಧ ಬೆಂಗಳೂರು ನಗರ ಜಿಲ್ಲಾ ಚುನಾವಣಾಧಿಕಾರಿ ವಿ.ನಂಜುಂಡಪ್ಪ ಇಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸಭಾಂಗಣದಲ್ಲಿ ಅಭ್ಯರ್ಥಿಗಳ ಸಭೆ ನಡೆಸಿ ಮಾತನಾಡಿ, ಚುನಾವಣಾ ಪ್ರಚಾರ ರಚನಾತ್ಮಕವಾಗಿರಲಿ. ಕ್ರೀಡಾ ಮನೋಭಾವನೆಯಿಂದ ಚುನಾವಣೆ ಎದುರಿಸಬೇಕು. ಮತದಾನದ ಸಂದರ್ಭದಲ್ಲಿ ಎಲ್ಲಾ ಅಭ್ಯರ್ಥಿಗಳು ಸೂಕ್ತ ಸಹಕಾರ ನೀಡಬೇಕು. ಬೆಂ.ನ.ಜಿಲ್ಲಾ ಘಟಕದಲ್ಲಿ 458 ಮಂದಿ ಅರ್ಹ ಮತದಾರರಿದ್ದು, ಮತದಾನಕ್ಕೆ ಎರಡು ಮತಗಟ್ಟೆಗಳನ್ನು ವ್ಯವಸ್ಥೆ ಮಾಡಲಾಗಿದೆ ಎಂದರು.



ಒಟ್ಟು 25 ಸ್ಥಾನಗಳ ಪೈಕಿ  3 ಕಾರ್ಯದರ್ಶಿ ಹುದ್ದೆಗಳಿಗೆ ಕೆ. ಹರೀಶ್, ಕೆ ಎಲ್ ಲೋಕೇಶ್, ಗೋದಾವರಿ ಡಿ ಎಸ್ ಅವರು ಉಮೇದುವಾರಿಕೆ ಸಲ್ಲಿಸಿದ್ದು, ಈ ಮೂರು ಕ್ಷೇತ್ರಗಳಿಗೆ [ಅವಿರೋಧ] ಚುನಾವಣೆ ನಡೆಯುತ್ತಿಲ್ಲ. ಅಧ್ಯಕ್ಷ ಸ್ಥಾನಕ್ಕೆ ಎಸ್.ಸೋಮಶೇಖರ್ (ಗಾಂಧಿ), ಮು. ವೆಂಕಟೇಶಯ್ಯ, ಎ. ಬಿ. ಶಿವರಾಜ್ ಅವರು ಸ್ಪರ್ಧೆಯಲ್ಲಿದ್ದಾರೆ. 3  ಉಪಾಧ್ಯಕ್ಷ ಸ್ಥಾನಗಳಿಗೆ ಡಾ. ಕೆ. ಎಸ್. ಸ್ವಾಮಿ, ಎಚ್ ಕೆ ಬಸವರಾಜ್, ಬಿ. ಟಿ ಶ್ರೀನಿವಾಸ್, ಪರಿಮಳ ಎಚ್.ಎಸ್, ಕೆ ಎಂ. ಜಕ್ರಿಯ ಕಣದಲ್ಲಿದ್ದಾರೆ.

ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಕೆ.ಸಿ. ವೇದಮೂರ್ತಿ, ಎನ್ ಶ್ರೀನಾಥ್, ಆರ್ ಜಯಕುಮಾರ್ ಗೌಡ, ಖಜಾಂಚಿ ಸ್ಥಾನಕ್ಕೆ ಎಸ್ ಡಿ. ಚಿಕ್ಕಣ್ಣ,  ಟಿ. ಮೋಹನ್, ರಾಜ್ಯ ಕಾರ್ಯಕಾರಿ ಸಮಿತಿ ಸ್ಥಾನಕ್ಕೆ  ಎಂ ಪಿ ಶರತ್ ಚಂದ್ರ, ಎಚ್ ಆರ್ ರವೀಶ್, ಕೆ.ವಿ.ಪರಮೇಶ್ ಕಣದಲ್ಲಿ ಉಳಿದಿದ್ದಾರೆ.



ಬೆಂಗಳೂರು ನಗರ ಜಿಲ್ಲಾ ಕಾರ್ಯಕಾರಿ ಸಮಿತಿಯ 15 ಸ್ಥಾನಗಳಿಗೆ ಸುಂದರೇಶ್ ಬಿ ಕೆ, ರಮಾಕಾಂತ್ ಗುಗ್ರಿ, ಎನ್ ಶಿವಾನಂದ್ ಆರ್ ರಾಜಗಿರಿ ಪ್ರದೀಪ್, ಹೋಮೇಶ್ ಮೂರ್ತಿ, ಶ್ಯಾಮ್ ಎಸ್, ಕೃಷ್ಣೇಗೌಡ, ಗಂಗರಾಜು, ಲಿಂಗರಾಜು ಡಿ ನೊಣವಿನಕೆರೆ, ಎಸ್. ಎಮ್. ಕೃಷ್ಣ, ಶರಣಬಸಪ್ಪ, ಚನ್ನವೀರಪ್ಪ ಜಿಆರ್, ಬಿ ಎನ್.ರಾಮಚಂದ್ರ, ಮಂಜುನಾಥ್ ನೀಲೆಸೊಗೆ, ಹನುಮಂತರಾಜು ಬಿಕೆ, ರವಿಕಾಂತ್ ಕುಂದಾಪುರ, ನಟರಾಜ್ ಬಿಪಿ, ಗಂಡಸಿ ಸದಾನಂದ ಸ್ವಾಮಿ, ಈ ಬಸವರಾಜು, ಡಿ ಎಲ್ ಹರೀಶ್, ಮೋಹನ್ ಕುಮಾರ್ ಬಿ ಎನ್ ಹಾಗೂ ಗಗನ್ ಕುಮಾರ್ ಎ ವಿ ಸೇರಿ 22 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

 

ಈ ಸಂದರ್ಭದಲ್ಲಿ ಸಹಾಯಕ ಚುನಾವಣಾಧಿಕಾರಿ ಎಸ್. ನರಸಿಂಹ ಮೂರ್ತಿ ಉಪಸ್ಥಿತರಿದ್ದರು.
Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST