ಬೆಂಗಳೂರು : ತನ್ನ ನಾಲ್ಕನೇ ಶ್ರೇಣಿಯ ಹಾಗೂ ಹೊಸ ಸಾಹಸಮಯ “ ಬಿಎಸ್ಎ ಥಂಡರ್ಬೋಲ್ಟ್ ಬೈಕ್”ನನ್ನು ಇಐಸಿಎಂಎ ನಲ್ಲಿಂದು ಅನಾವರಣಗೊಳಿಸಲಾಗಿದೆ.
ಈ ಬೈಕ್ ಅದ್ಭುತ ವಿನ್ಯಾಸ ಮತ್ತು ಇತ್ತೀಚಿನ ರೈಡರ್ ತಂತ್ರಜ್ಞಾನದ ಗಮನಾರ್ಹ ಸಂಯೋಜನೆಯೊಂದಿಗೆ ಬಿಡುಗಡೆಯಾಗಿದ್ದು, ಆಫ್ ರೋಡ್ ರೈಡರ್ಗಳ ಅಚ್ಚುಮೆಚ್ಚಿನ ಬೈಕ್ ಆಗಲಿದೆ.
ಈ ಕುರಿತು ಮಾತನಾಡಿದ ಬಿಎಸ್ಎ ಮಾಲೀಕತ್ವ ಹೊಂದಿರುವ ಕ್ಲಾಸಿಕ್ ಲೆಜೆಂಡ್ಸ್ ಪ್ರೈವೇಟ್ ಲಿಮಿಟೆಡ್ನ ಸಹ-ಸಂಸ್ಥಾಪಕ ಅನುಪಮ್ ಥರೇಜಾ , 1972 ರಲ್ಲಿ ಬರ್ಮಿಂಗ್ಹ್ಯಾಮ್ ಉತ್ಪಾದನಾ ಸಾಲಿನಿಂದ ಹೊರಬಂದ ಕೊನೆಯ ಬೈಕ್ನ ಪರಂಪರೆಯನ್ನು ಬಿಎಸ್ಎ ಯ ಮೊದಲ ಸಾಹಸ ಬೈಕ್ಗೆ ಹಸ್ತಾಂತರಿಸಿದೆ. ಹೊಸ ಬಿಎಸ್ಎ ಥಂಡರ್ಬೋಲ್ಟ್ ಹೊಸ ಪೀಳಿಗೆಯ ಸವಾರರಿಗೆ ಸಿದ್ಧವಾಗಿದೆ. ಹೊಸ ಬಿಎಸ್ಎ ಥಂಡರ್ಬೋಲ್ಟ್ ಮಾರುಕಟ್ಟೆಗೆ ಪರಿಚಯಿಸಿದೆ. 2026 ರ ಮಧ್ಯದಲ್ಲಿ ಮಾರುಕಟ್ಟೆಗೆ ಬರಲಿರುವ ಬ್ರ್ಯಾಂಡ್ನ ನಾಲ್ಕನೇ ಬೈಕ್, ಏಂತಹ ರೋಡ್ಗಳಾಗಿದ್ದರೂ ಸುಲಭವಾಗಿ ರೈಡ್ ಮಾಡುವ ಮಜ ನೀಡಲಿದೆ. ಮಳೆ, ಗಾಳಿ, ಧೂಳುಮಯ ಪ್ರದೇಶಕ್ಕೂ ಹೊಂದಿಕೆಯಾಗುವಂತೆ ಬೈಕ್ನನ್ನು ವಿನ್ಯಾಸಗೊಳಿಸಲಾಗಿದೆ ಎಂದರು