ಈ ಕುರಿತು ಪ್ರಕಟಣೆ ಹೊರಡಿಸಿರುವ ಅವರು, ಸೋಂಕು ಶ್ವಾಸಕೋಶದಲ್ಲಿ ಉರಿಯೂತ (ಊತ) ಉಂಟುಮಾಡುತ್ತದೆ. ಶ್ವಾಸಕೋಶದಲ್ಲಿರುವ ಗಾಳಿಯ ಚೀಲಗಳು ದ್ರವದಿಂದ ತುಂಬಿ, ಉಸಿರಾಡಲು ಕಷ್ಟವಾಗುತ್ತದೆ ಎಂದು ತಿಳಿಸಿದ್ದಾರೆ.

ನ್ಯುಮೋನಿಯಾದಲ್ಲಿ ಹಲವು ವಿಧಗಳಿವೆ. ಅವುಗಳಲ್ಲಿ ನ್ಯುಮೋಕೊಕಲ್ ನ್ಯುಮೋನಿಯಾ. ಇದು ಸ್ಟೆçಪ್ಟೋಕೊಕಸ್ ನ್ಯುಮೋನಿಯಾ ಎಂಬ ಬ್ಯಾಕ್ಟೀರಿಯದಿಂದ ಉಂಟಾಗುತ್ತದೆ. ವಿಶೇಷವಾಗಿ 12 ತಿಂಗಳು ಮತ್ತು ಅದಕ್ಕಿಂತ ಕಡಿಮೆ ವಯಸ್ಸಿನ ಶಿಶುಗಳು ಹಾಗೂ 70 ವರ್ಷಕ್ಕಿಂತ ಮೇಲ್ಪಟ್ಟ ಜನರಲ್ಲಿ ಕಂಡುಬರುತ್ತದೆ ಎಂದು ಹೇಳಿದರು.
ನ್ಯುಮೋನಿಯಾದ ಸಾಮಾನ್ಯ ಲಕ್ಷಣ:
ಜ್ವರ - 38 ಡಿಗ್ರಿ ಅಥವಾ ಅದಕ್ಕಿಂತ ಹೆಚ್ಚಿನ ತಾಪಮಾನ, ಕೆಮ್ಮು - ಇದು ಒಣಕೆಮ್ಮು ಅಥವಾ ದಪ್ಪ ಲೋಳೆಯನ್ನು ಉತ್ಪಾದಿಸಬಹುದು. ಉಸಿರಾಟದ ತೊಂದರೆ ತ್ವರಿತ ಉಸಿರಾಟ, ಸಾಮಾನ್ಯವಾಗಿ ದಣಿದ ಮತ್ತು ಅಸ್ವಸ್ಥ ಭಾವನೆ, ಹಸಿವಿನ ಕೊರತೆ ಹಾಗೂ ಇತರೆ ಲಕ್ಷಣಗಳು ಕಂಡುಬರುತ್ತವೆ.
ನ್ಯುಮೋನಿಯಾ ಇರುವ ಜನರು ಆಮ್ಲಜನಕದ ಕೊರತೆಯಿಂದಾಗಿ ಗೊಂದಲ ಅಥವಾ ದಿಗ್ಭçಮೆ (ವಿಶೇಷವಾಗಿ ವಯಸ್ಸಾದ ಜನರು) ಯಿಂದ ಕೂಡಿರುತ್ತಾರೆ. ಬಾಯಿಯ ಸುತ್ತ ನೀಲಿ ಬಣ್ಣಕ್ಕೆ ತಿರುಗುವುದು(ಸೈನೋಸಿಸ್), ಆಮ್ಲಜನಕದ ಕೊರತೆಯಿಂದಾಗಿ ತುಟಿಗಳು ನೀಲಿ ಬಣ್ಣಕ್ಕೆ ತಿರುಗಿದ್ದರೆ ಅಥವಾ ಗೊಂದಲಕ್ಕೊಳಗಾಗಿದ್ದರೆ, ತಕ್ಷಣವೇ ಆಂಬ್ಯುಲೆನ್ಸ್ ಗೆ ಕರೆ ಮಾಡಬೇಕು.
ಶ್ವಾಸಕೋಶದ ಸೋಂಕಿನಿAದ ನ್ಯುಮೋನಿಯಾ ಉಂಟಾಗುತ್ತದೆ. ಹೆಚ್ಚಿನ ಸೋಂಕುಗಳು ಬ್ಯಾಕ್ಟೀರಿಯಾ ಅಥವಾ ವೈರಸ್‌ಗಳಿಂದ ಉಂಟಾಗುತ್ತವೆ. ಶೀತ ಅಥವಾ ಜ್ವರದಿಂದ ನ್ಯುಮೋನಿಯಾ ಉಂಟಾಗಬಹುದು. ಇದು ಸೂಕ್ಷö್ಮಜೀವಿಗಳು ಶ್ವಾಸಕೋಶವನ್ನು ಪ್ರವೇಶಿಸಲು ಅನುವು ಮಾಡಿಕೊಡುತ್ತದೆ.
ಬ್ಯಾಕ್ಟೀರಿಯಾದ ನ್ಯುಮೋನಿಯಾವು ಸ್ಟ್ರೆಪ್ಟೋಕೊಕಸ್ ನ್ಯುಮೋನಿಯಾ ಎಂದು ಕರೆಯಲ್ಪಡುವ ನ್ಯುಮೋಕೊಕಲ್ ಬ್ಯಾಕ್ಟೀರಿಯಾದಿಂದ ಉಂಟಾಗಬಹುದು. ಇದು ನ್ಯುಮೋನಿಯಾದ ಅತ್ಯಂತ ಕೆಟ್ಟ ವಿಧಗಳಲ್ಲಿ ಒಂದಾಗಿದೆ. ಆಗ ಉಸಿರಾಟದ ತೊಂದರೆ ಇದ್ದರೆ ಹತ್ತಿರದ ಆಸ್ಪತ್ರೆಯ ತುರ್ತು ವಿಭಾಗ ಅಥವಾ ಆಂಬ್ಯುಲೆನ್ಸ್ ಗಾಗಿ 108ಗೆ ಕರೆ ಮಾಡಬೇಕು ಎಂದಿದ್ದಾರೆ.
ನ್ಯುಮೋನಿಯಾ ಚಿಕಿತ್ಸೆ:
ಬ್ಯಾಕ್ಟೀರಿಯಾದ ನ್ಯುಮೋನಿಯಾಕ್ಕೆ ಪ್ರತಿಜೀವಕ ಚಿಕಿತ್ಸೆ ನೀಡಲಾಗುತ್ತದೆ. ವೈರಲ್ ನ್ಯುಮೋನಿಯಾಕ್ಕೆ ಚಿಕಿತ್ಸೆಯು ಸಾಮಾನ್ಯವಾಗಿ ವಿಶ್ರಾಂತಿ, ದ್ರವಗಳು ಮತ್ತು ನೋವು ನಿವಾರಕಗಳನ್ನು ಒಳಗೊಂಡಿರುತ್ತದೆ. ಶಿಲೀಂಧ್ರಗಳ ನ್ಯುಮೋನಿಯಾಕ್ಕೆ ಆಂಟಿಫAಗಲ್ ಔಷಧಗಳನ್ನು ನೀಡಲಾಗುತ್ತದೆ. ನ್ಯುಮೋನಿಯಾ ಯಶಸ್ವಿಯಾಗಿ ಚಿಕಿತ್ಸೆ ಪಡೆದ ನಂತರ ಕೆಮ್ಮು ಹಲವಾರು ವಾರಗಳವರೆಗೆ ಇರುತ್ತದೆ ಎಂದು ತಿಳಿಸಿದ್ದಾರೆ.

ನ್ಯುಮೋನಿಯಾ ರೋಗನಿರ್ಣಯ ಹೇಗೆ?:
ವೈದ್ಯರು ಆಪ್ತಸಮಾಲೋಚನೆ ಮೂಲಕ ನ್ಯುಮೋನಿಯಾವನ್ನು ಪತ್ತೆ ಮಾಡುತ್ತಾರೆ ಮತ್ತು ರಕ್ತ ಪರೀಕ್ಷೆಗಳು, ಎದೆಯ ಎಕ್ಸ್-ರೇ ಮೂಲಕ ಕಂಡುಹಿಡಿಯುತ್ತಾರೆ.
ಚಿಕಿತ್ಸೆ ಪಡೆದ ನಂತರ ಸಾಕಷ್ಟು ವಿಶ್ರಾಂತಿ ಪಡೆಯಬೇಕು. ನಿರ್ಜಲೀಕರಣ ತಪ್ಪಿಸಲು ಸಾಕಷ್ಟು ದ್ರವ ಪದಾರ್ಥಗಳ ಸೇವನೆ ಮಾಡಬೇಕು. ನೋವು ನಿವಾರಿಸಲು ಮತ್ತು ಜ್ವರ ಕಡಿಮೆ ಮಾಡಲು ಪ್ಯಾರಸಿಟಮಾಲ್ ಮಾತ್ರೆ ಬಳಸಬಹುದು. ಧೂಮಪಾನಿಗಳಾಗಿದ್ದರೆ ಧೂಮಪಾನ ಬಿಡಲು ಪ್ರಯತ್ನಿಸಬೇಕು. ಶ್ವಾಸಕೋಶಗಳಿಗೆ ಕಿರಿಕಿರಿ ಉಂಟುಮಾಡುವ ಸೌದೆ ಬೆಂಕಿ ಮತ್ತು ಸಿಗರೇಟ್ ಹೊಗೆಯಂತಹ ವಸ್ತುಗಳಿಂದ ದೂರವಿರಬೇಕು.

ನ್ಯುಮೋನಿಯಾವನ್ನು ತಡೆಯಬಹುದೇ?:
ನ್ಯುಮೋನಿಯಾದಿಂದ ತಡೆಗಟ್ಟುವಿಕೆಯೇ ಅತ್ಯುತ್ತಮ ರಕ್ಷಣೆ. ಲಸಿಕೆಗಳು ಕೆಲವು ರೀತಿಯ ನ್ಯುಮೋನಿಯಾವನ್ನು ತಡೆಗಟ್ಟಲು ಸಹಾಯ ಮಾಡುತ್ತದೆ. ನ್ಯುಮೋನಿಯಾ ಅಪಾಯವನ್ನು ಕಡಿಮೆ ಮಾಡುವ ಒಂದು ಲಸಿಕೆ ಅದು ನ್ಯುಮೋಕೊಕಲ್ ಲಸಿಕೆ. ರಾಷ್ಟ್ರೀಯ ರೋಗ ನಿರೋಧಕ ಕಾರ್ಯಕ್ರಮದ ಮೂಲಕ ಮಕ್ಕಳಿಗೆ ನ್ಯುಮೋಕಾಕಲ್ ಲಸಿಕೆಯನ್ನನು 6ನೇ ವಾರ, 14ನೇ ವಾರ ಮತ್ತು 9 ತಿಂಗಳಿನಲ್ಲಿ ನೀಡಲಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಆಸ್ಪತ್ರೆಗೆ ಭೇಟಿ ಸೂಕ್ತ ಪರಿಹಾರ ಪಡೆದುಕೊಳ್ಳಬಹುದು ಎಂದು ಡಿಹೆಚ್‌ಓ ತಿಳಿಸಿದ್ದಾರೆ.