ಬೆಂಗಳೂರು : ಎಪಿಎಸ್ ಪಬ್ಲಿಕ್ ಸ್ಕೂಲ್ ಗೆ ಬೆಂಗಳೂರಿನ ಶ್ರೇಷ್ಠ ಶಾಲೆ [ಮೋಸ್ಟ್ ಡೈನಾಮಿಕ್ ಸ್ಕೂಲ್ ಆಫ್ ಬೆಂಗಳೂರು] ಎಂಬ ಪ್ರಶಸ್ತಿ ಸಂದಿದೆ.
ತಾಜ್ ವೆಸ್ಟ್ ಎಂಡ್ ನಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಡಾ. ವಿಷ್ಣು ಭರತ್ ಅಲ್ಲಂಪಲ್ಲಿ ಪ್ರಶಸ್ತಿ ಸ್ವೀಕರಿಸಿದರು.
ಎಜುಕೇಶನ್ ಟುಡೆ ರಾಷ್ಟ್ರಮಟ್ಟದ ಪತ್ರಿಕೆ ಜಮ್ಮು ಕಾಶ್ಮೀರ, ಮಹಾರಾಷ್ಟ್ರ, ಉತ್ತರ ಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ ಸ್ಪರ್ಧೆ ನಡೆಸಿ ನಮ್ಮ ಶಿಕ್ಷಣ ಸಂಸ್ಥೆಯನ್ನು ಪ್ರಶಸ್ತಿಗೆ ಆಯ್ಕೆ ಮಾಡಿದೆ ಎಂದು ಡಾ. ವಿಷ್ಣು ಭರತ್ ಅಲಂಪಲ್ಲಿ ತಿಳಿಸಿದರು.