LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಎ.ಎಂ/ಎನ್.ಎಸ್ ಇಂಡಿಯಾ ಒಇಎಂ ಸೆಗ್ಮೆಂಟ್ ಗುರಿಯಾಗಿ ವೈಬ್ರಾನ್ಸ್, ಆಪ್ಟಿಮಾ ಬಿಡುಗಡೆ

ಬೆಂಗಳೂರು  ಏರ್ಸೆಲ್ ಮಿತ್ತಲ್ ನಿಪ್ಪಾನ್ ಸ್ಟೀಲ್ ಇಂಡಿಯಾ ತನ್ನ ಮೌಲ್ಯವರ್ಧಿತ ಉಕ್ಕಿನ ಘಟಕವನ್ನು ವಿಸ್ತರಿಸಿದ್ದು, ಎ.ಎಂ/ಎನ್.ಎಸ್ ಇಂಡಿಯಾ ಒಇಎಂ ಸೆಗ್ಮೆಂಟ್ ಗುರಿಯಾಗಿ ವೈಬ್ರಾನ್ಸ್, ಆಪ್ಟಿಮಾ ಬಿಡುಗಡೆ ಮಾಡಿದೆ.

ಈ ಉತ್ಪನ್ನಗಳು ಉಪಕರಣ ಹಾಗೂ ಕೈಗಾರಿಕಾ ಉತ್ಪಾದನಾ ಕ್ಷೇತ್ರದ ಒಇಎಂಗಳ ಹೆಚ್ಚುತ್ತಿರುವ ನಿಖರತೆ ಮತ್ತು ಮೇಲ್ಮೈ ಗುಣಮಟ್ಟದ ಬೇಡಿಕೆಯನ್ನು ಗುರಿಯಾಗಿಸಿಕೊಂಡಿವೆ.

ಎ.ಎಂ/ಎನ್.ಎಸ್ ವೈಬ್ರಾನ್ಸ್ ಪ್ರೀಮಿಯಂ ಬಣ್ಣ-ಲೇಪಿತ ಉಕ್ಕಾಗಿದ್ದು, ಗೃಹೋಪಕರಣಗಳಿಗೆ ಹೊಂದುವಂತೆ ಸ್ಥಿರ ಬಣ್ಣ, ನಿಯಂತ್ರಿತ ಹೊಳಪು ಮತ್ತು ಉತ್ತಮ ಮೇಲ್ಮೈ ಪೂರ್ಣಗೊಳಿಸುವಿಕೆಯನ್ನು ಒದಗಿಸುತ್ತದೆ. ಇದು ರೆಫ್ರಿಜರೇಟರ್, ವಾಷಿಂಗ್ ಮೆಷಿನ್, ಮೈಕ್ರೋವೇವ್ ಓವನ್ ಮುಂತಾದ ಉತ್ಪನ್ನಗಳಿಗೆ ಸೂಕ್ತವಾಗಿದೆ.

ಎ.ಎಂ/ಎನ್.ಎಸ್ ಆಪ್ಟಿಮಾ ಟ್ರೂ ಝೀರೋ-ಸ್ಪ್ಯಾಂಗಲ್ ಗ್ಯಾಲ್ವನೈಸ್ಡ್ ಸ್ಟೀಲ್ ಆಗಿದ್ದು, ಹೆಚ್ಚಿದ ಮೇಲ್ಮೈ ಏಕರೂಪತೆ ಮತ್ತು ನಿಖರತೆ ಒದಗಿಸುತ್ತದೆ. ಎಸಿ ಔಟ್‌ಡೋರ್ ಯೂನಿಟ್‌ಗಳು, ಪ್ಯಾನೆಲ್‌ಗಳು ಮತ್ತು ಕೈಗಾರಿಕಾ ಅನ್ವಯಿಕೆಗಳಿಗೆ ಇದು ಬಳಸಲಾಗುತ್ತದೆ.

ಭಾರತದ ಲೇಪಿತ ಉಕ್ಕಿನ ಬೇಡಿಕೆ ಪ್ರಸ್ತುತ ಸುಮಾರು 11.1 ದಶಲಕ್ಷ ಟನ್ ನಷ್ಟಿದ್ದು,  ಮುಂದಿನ ವರ್ಷಗಳಲ್ಲಿ 8–10% ಸಿಎಜಿಆರ್ ನಲ್ಲಿ ಬೆಳೆಯುವ ನಿರೀಕ್ಷೆಯಿದೆ. ಒಇಎಂಗಳಿಗೆ ಜಾಗತಿಕ ಗುಣಮಟ್ಟದ ಉಕ್ಕನ್ನು ದೇಶೀಯವಾಗಿ ಲಭ್ಯವಾಗುವಂತೆ ಮಾಡುವುದು ಹಾಗೂ ಆಮದು ಅವಲಂಬನೆಯನ್ನು ಕಡಿಮೆ ಮಾಡುವುದು ಕಂಪನಿಯ ಉದ್ದೇಶವಾಗಿದೆ.
Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST