LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಪ್ರಥಮ ವರ್ಷದ ಬಿಕಾಂ ವಿದ್ಯಾರ್ಥಿಗಳಿಗೆ ಅಭಿ ವಿನ್ಯಾಸ ಕಾರ್ಯಕ್ರಮ

ದಾವಣಗೆರೆ: ನಗರದ  ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಐಕ್ಯೂಎಸಿ ಹಾಗೂ ವಾಣಿಜ್ಯಶಾಸ್ತ್ರ ವಿಭಾಗದ ವತಿಯಿಂದ ಪ್ರಥಮ ವರ್ಷದ ಬಿಕಾಂ ವಿದ್ಯಾರ್ಥಿಗಳಿಗೆ ಅಭಿ ವಿನ್ಯಾಸ ಕಾರ್ಯಕ್ರಮವನ್ನು  ಆಯೋಜಿಸಲಾಯಿತು.

 

ಕಾರ್ಯಕ್ರಮದಲ್ಲಿ ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಪ್ರೊ ಸುನಿತಾ ಕೆ ಬಿ ಪ್ರಾಸ್ತಾವಿಕವಾಗಿ ಮಾತನಾಡಿ ವಿದ್ಯಾರ್ಥಿಗಳಿಗೆ ಉದ್ದೇಶಬೋಧನೆ ನೀಡಿದರು. ನಂತರ ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌ಎಸ್) ಕುರಿತು ಪ್ರೊ. ಲೋಕೇಶ್ ನಾಯಕ್ ಮಾರ್ಗದರ್ಶನ ನೀಡಿದರು. ಅದೇ ರೀತಿ ಎನ್‌ಸಿಸಿ ಬಗ್ಗೆ  ಪ್ರೊ ರೇಖಾ ಎಂ ಪಿ  ವಿವರವಾಗಿ ವಿದ್ಯಾರ್ಥಿಗಳಿಗೆ ಪ್ರೇರಣಾದಾಯಕ ಮಾತುಗಳನ್ನು ನೀಡಿದರು. ಶಿಸ್ತು ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವ ಕುರಿತು ಮಾತನಾಡಿದರು

 

ಕಾಲೇಜಿನ ಆಂತರಿಕ ಪರೀಕ್ಷೆಗಳ ಮಹತ್ವ, ಶಿಸ್ತು, ಸಮವಸ್ತ್ರ ಹಾಗೂ ಇತರ ನಿಬಂಧನೆಗಳ ಕುರಿತು   ಪ್ರೊ ರೇಖಾ ರವರು ಮಾತನಾಡಿ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಿದರು. ಸಾಂಸ್ಕೃತಿಕ ಚಟುವಟಿಕೆಗಳ ಬಗ್ಗೆ ನರೇಶ್ ಯು.ಸಿ. ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.



ವಿಭಿನ್ನ ಸಮಿತಿಗಳ ಸದಸ್ಯರು ಸಹ ಭಾಗವಹಿಸಿ ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಿದರು. ಕಾರ್ಯಕ್ರಮದ ಆರಂಭದಲ್ಲಿ ಯಶೋಧ ಆರ್. ಪ್ರಾರ್ಥನೆ ಸಲ್ಲಿಸಿದರು. ಸುರೇಖಾ ರವರು ಸ್ವಾಗತಿಸಿ, ಪ್ರೊ ಪ್ರಭುನಾಯ್ಕ್ ಕಾರ್ಯಕ್ರಮವನ್ನು ನಿರೂಪಿಸಿದರು. ಪ್ರೊ ನಿಂಗಪ್ಪ ಟಿ ಅವರು ವಂದಿಸಿದರು

ಕಚೇರಿ ವತಿಯಿಂದ ಶ್ರೀ ಜಗದೀಶ್ ರವರು ವಿದ್ಯಾರ್ಥಿಗಳಿಗೆ ಎಲ್ಲಾ ರೀತಿಯ ಸೌಕರ್ಯಗಳನ್ನು ನೀಡುವುದಾಗಿ ಹೇಳುತ್ತಾ ಹಾಗೂ ಯಾವ ಯಾವ ರೀತಿಯ ವಿದ್ಯಾರ್ಥಿ ವೇತನಗಳು ನೊಂದಣಿ ಪರೀಕ್ಷೆಗಳ ಕುರಿತು ಮಾಹಿತಿ ನೀಡಿದರು

 

ಐಕ್ಯೂ ಎಸಿ ಸಂಚಾಲಕರಾದ ಗುರುರಾಜ್ ಜೆ.ಪಿ. ಕಾರ್ಯಕ್ರಮದ ರೂಪರೇಖೆಯನ್ನು ವಿವರಿಸಿ, ಮುಂದಿನ ಚಟುವಟಿಕೆಗಳ ಕುರಿತು ವಿದ್ಯಾರ್ಥಿಗಳಿಗೆ ತಿಳಿಸಿದರು.

ಕಾರ್ಯಕ್ರಮದಲ್ಲಿ ಪ್ರೊ ಚೆನ್ನಬಸಪ್ಪ  ಪ್ರೊ ವೆಂಕಟೇಶ್ ಬಾಬು ಎಸ್ ಪ್ರೊ ಮಂಜುನಾಥ್ ಪ್ರೊ ಚೈತ್ರ ಪಿ ಹಾಜರಿದ್ದರು
Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST