ಎರಡು ಬಾರಿ ಸೀಸೇರಿಯನ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಮಹಿಳೆ ಈಗಾಗಲೇ ಎರಡು ಬಾರಿ ಡಿ ಮತ್ತು ಸಿ ಶಸ್ತ್ರಚಿಕಿತ್ಸೆಗೂ ಒಳಗಾಗಿದ್ದರು. ಆದರೂ ಯಾವುದೇ ಪರಿಹಾರ ದೊರಕಿರಲಿಲ್ಲ. ಪರಿಸ್ಥಿತಿ ಹಂತ ಹಂತವಾಗಿ ಗಂಭೀರವಾಗತೊಡಗಿತು. ಇದರಿಂದ ಗರ್ಭಾಶಯದ ಕ್ಯಾನ್ಸರ್ ಶಂಕೆ ಏರಿತು. ಮೆಡಿಕವರ್‌ನಲ್ಲಿ ಹೆಚ್ಚಿನ ತಪಾಸಣೆಯ ಬಳಿಕ, ಸೀಸೇರಿಯನ್‌ನಿಂದ ಉಂಟಾದ ಗಟ್ಟಿಯಾದ ಅಂಟಿಕೆಗಳಿAದ ಗರ್ಭಾಶಯ ಸುತ್ತಲಿನ ಅಂಗಗಳಿಗೆ ಬೆಸೆದುಕೊಂಡಿರುವುದು ತಿಳಿಯಿತು. ಸಾಮಾನ್ಯ ಶಸ್ತ್ರಚಿಕಿತ್ಸೆಯಲ್ಲಿ ಇದು ಅಪಾಯಕಾರಿಯಾಗಿತ್ತು.

ಡಾ. ಸಭಿಹಾ ಅವರು ರೊಬೋಟಿಕ್ ತಂತ್ರಜ್ಞಾನ ಬಳಸಿ ರೊಬೋಟಿಕ್ ಹಿಸ್ಟರೆಕ್ಟಮಿ (ಗರ್ಭಾಶಯ ತೆಗೆದುಹಾಕುವ ಶಸ್ತ್ರಚಿಕಿತ್ಸೆ) ನಡೆಸಿದರು. ಶಸ್ತ್ರಚಿಕಿತ್ಸೆಯಲ್ಲಿ ಅವರು ಅಂಟಿಕೆಗಳನ್ನು ಒಂದೊAದಾಗಿ ಬೇರ್ಪಡಿಸಿ, ಗರ್ಭಾಶಯವನ್ನು ಸುರಕ್ಷಿತವಾಗಿ ತೆಗೆದುಹಾಕಿದರು. ಇಂತಹ ಗಂಭೀರ ಪ್ರಕರಣಗಳಲ್ಲಿ ರೊಬೋಟಿಕ್ ತಂತ್ರಜ್ಞಾನ ನಿಖರ ದೃಷ್ಟಿ ಮತ್ತು ನಿಖರ ನಿಯಂತ್ರಣ ಒದಗಿಸುತ್ತದೆ. ಇದು ರಕ್ತಸ್ರಾವ ಕಡಿಮೆ ಮಾಡುತ್ತದೆ, ನೋವು ಕಡಿಮೆ ಆಗುತ್ತದೆ ಮತ್ತು ಗುಣಮುಖತೆ ವೇಗವಾಗಿ ನಡೆಯುತ್ತದೆ ಎಂದು ಡಾ. ಸಭಿಹಾ ತಿಳಿಸಿದ್ದಾರೆ.
ಈ ಶಸ್ತ್ರಚಿಕಿತ್ಸೆ ನಂತರ ರೋಗಿಗೆ ಯಾವುದೇ ತೊಂದರೆ ಆಗದೆ, ೨೪ ಗಂಟೆಗಳಲ್ಲಿ ಡಿಸ್ಚಾರ್ಜ್ ಮಾಡಲಾಯಿತು. ಈ ಪ್ರಕರಣವು ಹಳೆಯ ಸೀಸೇರಿಯನ್ ಮಾಡಿದ ಮಹಿಳೆಯರಲ್ಲಿ, ಗರ್ಭಾಶಯ ಸಂಬಂಧಿತ ಸಮಸ್ಯೆಗಳಿಗೆ ರೊಬೋಟಿಕ್ ಶಸ್ತ್ರಚಿಕಿತ್ಸೆ ಅತ್ಯಂತ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂಬುದಕ್ಕೆ ಸ್ಪಷ್ಟ ಸಾಕ್ಷಿಯಾಗಿದೆ.