ನಾಯಕನಹಟ್ಟಿ : ನೆಲಗೇತನಹಟ್ಟಿ ಸರ್ಕಾರಿ ಪ್ರೌಢಶಾಲೆ ಆವರಣಕ್ಕೆ ಕಾಲಿಟ್ಟರೆ ಸಾಕು ಕೈ ಬೀಸಿ ಕರೆಯುವ ಪ್ರಕೃತಿ ಮಾತೆ, ಎಲ್ಲಿ ನೋಡಿದರಲ್ಲಿ ಹಚ್ಚ ಹಸಿರಿನಿಂದ ಕಾಣುತ್ತದೆ. ಮಕ್ಕಳಿಗೆ ಆಸರೆ ನೀಡುವ ಗಿಡ-ಮರಗಳು ನೋಡಲು ಖುಷಿ ಸಿಗುತ್ತದೆ. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ೨೦೧೮ ಮತ್ತು ೨೦೧೯ರಲ್ಲಿ ಚಿತ್ರದುರ್ಗ ಇವರ ವತಿಯಿಂದ ಪರಿಸರ ಮಿತ್ರ ಹಸಿರು ಶಾಲೆ ಎಂದು ಪ್ರಶಸ್ತಿ ಬಂದಿದೆ.
ಶಿಸ್ತು, ಸ್ವಚ್ಚತೆ, ಸಮಯ ಪಾಲನೆಯಲ್ಲಿ ಮುಂದಿದೆ. ಇಲ್ಲಿಯ ಮಕ್ಕಳಿಗೆ ಪಾಠದೊಂದಿಗೆ ಪರಿಸರ ಸಂರಕ್ಷಣೆ, ಕ್ರೀಡೆ, ಪಠ್ಯೇತರ ಚಟುವಟಿಕೆಗಳಿಗೂ ಆದ್ಯತೆ ನೀಡಲಾಗುತ್ತದೆ. ಎಸ್.ಡಿ.ಎಂ.ಸಿ ಅಧ್ಯಕ್ಷರು, ಸದಸ್ಯರು, ಗ್ರಾಮಸ್ಥರು ಪೋಷಕರಿಂದ ಆವರಣದಲ್ಲಿ ವಿವಿಧ ಜಾತಿಯ ಗಿಡ-ಮರಗಳನ್ನು ಬಳಸಲಾಗಿದೆ. ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಪರಿಶ್ರಮದಿಂದ ಪರಿಸರ ಸ್ನೇಹಿಯಾಗಿ ಶಾಲೆಯಾಗಿ ನಿರ್ಮಾಣವಾಗಿದೆ. ಶಾಲೆಯ ಆವರಣದಲ್ಲಿ ಹಚ್ಚ ಹಸಿರಿನಿಂದ ಕೂಡಿರುವ ಶಾಲೆಯಲ್ಲಿ ಓದುವುದರಿಂದ ಮಕ್ಕಳಿಗೆ ಸ್ಪೂರ್ತಿ ಸಿಗುತ್ತದೆ. ಈ ಶಾಲೆಯಲ್ಲಿ ೯ ಶಿಕ್ಷಕರಿದ್ದರು, ೨೦೩ ವಿದ್ಯಾರ್ಥಿಗಳು ಶಾಲೆಯಲ್ಲಿ ಓದುತ್ತಾರೆ. ಗುಣಮಟ್ಟದ ಶಿಕ್ಷಣ ಒದಗಿಸುತ್ತಿದ್ದಾರೆ.

ಕ್ರೀಡೆಯಲ್ಲಿ ಜಿಲ್ಲಾಮಟ್ಟದ ದ್ವಿತೀಯ ಬಹುಮಾನ ಪಡೆದಿದ್ದಾರೆ. ಇಲ್ಲಿನ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಕಲಿಕೆ ನೀಡಲಾಗುತ್ತದೆ. ವಿದ್ಯಾರ್ಥಿಗಳಿಗೆ ಪ್ರತಿದಿನ ಊಟ ಬಾಳೆಹಣ್ಣು ನೀಡಲಾಗುತ್ತದೆ. ಶಿಕ್ಷಕರು ಉತ್ತಮವಾಗಿ ಮಕ್ಕಳಿಗೆ ಬೋಧನೆ ಮಾಡುತ್ತಿದ್ದಾರೆ. ಆವರಣದ ಗಿಡಗಳು ತಂಪು ನೆರಳು ಸ್ವಚ್ಚ ಮೈದಾನ ವಿದ್ಯಾರ್ಥಿಗಳ ಕಲಿಕೆಗೆ ಪೂರಕ ವಾತಾವರಣ ಪರಿಸರದ ಮೂಲಕ ಎಲ್ಲಾರ ಗಮನ ಸೆಳೆದಿದೆ. ವಿವಿಧ ನೋಡುಗರನ್ನು ಸೆಳೆಯುತ್ತದೆ. ಸರ್ಕಾರಿ ಪ್ರೌಢ ಶಾಲೆ ಪರಿಸರ ಪ್ರೇಮಿ ಶಾಲೆ ಎಂದರೆ ತುಂಬಾ ಚೆನ್ನಾಗಿದೆ. ಇದರಿಂದ ಮಕ್ಕಳಿಗೆ ಪರಿಸರದ ಬಗ್ಗೆ ಕಲಿಯಲು ಮತ್ತು ಅದನ್ನು ರಕ್ಷಿಸಲು ಪ್ರೇರೆಪಿಸುತ್ತದೆ. ವಿದ್ಯಾರ್ಥಿಗಳಿಗೆ ಗಿಡ-ಮರಗಳ ಬಗ್ಗೆ ತುಂಬಾ ಆಸಕ್ತಿ. ಇದರಿಂದ ಅವರು ಪ್ರಕೃತಿಯ ಬಗ್ಗೆ ಕಾಳಜಿ ಇದೆ. ಶಾಲೆ ತುಂಬಾ ಸುಂದರವಾಗಿದೆ. ಗಿಡ-ಮರಗಳಿಂದ ಶಾಲೆಗೆ ಹೊಸ ಚೈತನ್ಯ ಬಂದಿದೆ.
ಇದರಿಂದ ಶಾಲೆ ತುಂಬಾ ಹಸಿರು ಹಸಿರಾಗಿ ಕಾಣುತ್ತದೆ. ಮಕ್ಕಳಿಗೆ ಕಲಿಯಲು ಒಳ್ಳೆ ವಾತಾವರಣ. ಶಾಲೆ ವಿಶಾಲವಾದ ಆವರಣದ ಹಸಿರಿನಿಂದ ಕಂಗೋಳಿಸುವ ಸುಂದರ ವನ, ಎಲ್ಲಾರ ಆಕರ್ಷಣೆಯ ಕೇಂದ್ರ. ಆವರಣದಲ್ಲಿ ಕಾಲಿಡುವ ಮಕ್ಕಳಿಗೆ ಉತ್ತಮ ಪರಿಸರ ಇದೆ. ಕಲಿಕೆಗೆ ಪೂರಕವಾದ ಒಳ್ಳೆಯ ವಾತಾವರಣವನ್ನು ಶಾಲೆಯಲ್ಲಿ ಮಕ್ಕಳಿಗೆ ಕಲ್ಪಿಸಲಾಗಿದೆ. ಶಾಲೆಯ ಆವರಣದಲ್ಲಿ ವಿವಿಧ ಬಗೆ ಗಿಡ ಮರಳಗನ್ನು ಬೆಳೆಸಿ ಪರಿಸರ ಕಾಳಜಿ ಮೆರೆದಿದೆ. ಶಾಲೆಯಲ್ಲಿ ಸುಸಜ್ಜಿತವಾದ ಕೊಠಡಿಗಳು ಇವೆ, ಸುಸಜ್ಜಿತವಾದ ಕಾಂಪೌಂಡ್, ಗೇಟ್, ಶೌಚಾಲಯ, ನೀರಿನ ಬೋರ್ವೆಲ್ ಇದೆ. ವಿದ್ಯುತ್ ಸೋಲಾರ್, ಗ್ರಂಥಾಲಯ ಹೊಂದಿದ್ದು, ವಿವಿಧ ಗಿಡ-ಮರ, ಸಸಿ ನೆಟ್ಟಿದ್ದಾರೆ. ಶಾಲೆಯ ಬೋದನ ಕೊಠಡಿಗಳು, ಗ್ರಂಥಾಲಯ, ಅಡುಗೆ ಕೋಣೆ, ಭೋಚನಾಲಯ, ಕ್ರೀಡೆ ಸಾಮಾಗ್ರಿಗಳ, ಕೊಠಡಿ ಈಗೆ ಎಲ್ಲಾದಕ್ಕೂ ಪ್ರತ್ಯೇಕ ಕೊಠಡಿಗಳಿವೆ. ಉತ್ತಮ ಆಟದ ಮೈದಾನ, ಸುಂದರವಾದ ಪರಿಸರ ಸ್ನೇಹಿ ವಾತಾವರಣ ಇದೆ. ಹಸಿರು ಗಿಡಬಳ್ಳಿಗಳು ಶಾಲೆಗೆ ಹೋಗುವವರನ್ನು ಅದರಿಂದ ಸ್ವಾಗತಿಸುತ್ತದೆ. ಸ್ವಚ್ಚ ಹಾಗೂ ಸುಂದರ ಶಾಲಾ ಪರಿಸರ ಎಲ್ಲಾರನ್ನು ಸೆಳೆಯುವಂತೆ ನಿರ್ಮಾಣಗೊಂಡಿದೆ. ಶಾಲೆಯ ಮಕ್ಕಳು ಪರಿಸರ ಪ್ರೇಮ ಇಲ್ಲಿ ಎಲ್ಲಾರ ಗಮನ ಸೆಳೆದಿದೆ. ಈ ಶಾಲೆಯ ಮಕ್ಕಳು ಪಾಠದ ಜೊತೆಗೆ ಕ್ರೀಡೆಗಳ ಚಟುವಟಿಕೆಯಲ್ಲಿ ತುಂಬಾ ಕ್ರಿಯಾಶೀಲರಾಗಿದ್ದಾರೆ. ಶಾಲೆಗೆ ಹೋಗುವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ನಿಲಯ ಸೌಲಭ್ಯವಿದೆ. ಹಳೆಯ ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ ಮಕ್ಕಳಿಗೆ ಟ್ಯೂಷನ್ ಮಾಡುತ್ತಿದ್ದಾರೆ.

ಮಕ್ಕಳಿಗೆ ಶಿಕ್ಷಕರು ಉತ್ತಮ ಬೋಧನೆ ಮಾಡುತ್ತಾರೆ. ಶಿಕ್ಷಕ ಶಿಕ್ಷಕಿಯರಿಂದ ಪರಿಸರ ಬೆಳೆಯಲಿಕ್ಕೆ ಸಾಧ್ಯವಾಗಿದೆ. ಶಾಲೆಯಲ್ಲಿ ಸುಸಜ್ಜಿತವಾದ ಕೊಠಡಿಗಳು ಇವೆ, ಸುಸಜ್ಜಿತವಾದ ಕಾಂಪೌಂಡ್, ಗೇಟ್, ಶೌಚಾಲಯ, ನೀರಿನ ಬೋರ್ವೆಲ್ ಇದೆ. ವಿದ್ಯುತ್ ಸೋಲಾರ್, ಗ್ರಂಥಾಲಯ ಹೊಂದಿದ್ದು, ವಿವಿಧ ಗಿಡ-ಮರ, ಸಸಿ ನೆಟ್ಟಿದ್ದಾರೆ. ಶಾಲೆಯ ಬೋದನ ಕೊಠಡಿಗಳು, ಗ್ರಂಥಾಲಯ, ಅಡುಗೆ ಕೋಣೆ, ಭೋಚನಾಲಯ, ಕ್ರೀಡೆ ಸಾಮಾಗ್ರಿಗಳ, ಕೊಠಡಿ ಈಗೆ ಎಲ್ಲಾದಕ್ಕೂ ಪ್ರತ್ಯೇಕ ಕೊಠಡಿಗಳಿವೆ.
ಬಿ.ವಿಶ್ವನಾಥ, ಮುಖ್ಯ ಶಿಕ್ಷಕರು