ಮರಿಯಮ್ಮನಹಳ್ಳಿ: ಪಟ್ಟಣ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 50 ರಲ್ಲಿ ಬರುವ ಡಣಾಯಕನಕೆರೆ ಮಾಗಾಣಿ ಕ್ರಾಸ್ ಬಳಿ ಎಮ್ಮೆಯೊಂದು ರಸ್ತೆದಾಟುವಾಗ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೆ ಮೃತ ಪಟ್ಟಿದೆ.
ಪಟ್ಟಣದ ನಿವಾಸಿ ಕೆ ಮಲ್ಲಮ್ಮ ಎಮ್ಮೆಯ ಮಾಲಕಿಯಾಗಿದ್ದು, ಸಂಜೆ ಎಮ್ಮೆ ಮೇಯಿಸಿಕೊಂಡು ಮನೆಗೆ ಬರುವಾಗ ಈ ಅವಘಡ ಸಂಭವಿದೆ. ಅಂದಾಜು 1 ಲಕ್ಷ ರೂ. ಕೊಟ್ಟು ಎಮ್ಮೆಯನ್ನು ಕೊಂಡಿದ್ದರು. ಎಮ್ಮೆ ಹೀಲಿಯಾಗಿದ್ದು ಡಿಕ್ಕಿ ರಭಸಕ್ಕೆ ಹೊಟ್ಟೆಯೊಳಗಿನ ಕರು ಹೊರ ಬಂದಿದ್ದು ನೋಡುಗರ ಹೃದಯ ಕಲಕಿತು. ಪಟ್ಟಣ ಪೊಲೀಸ್ ಠಾಣೆಯಿಂದ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ.