ಮರಿಯಮ್ಮನಹಳ್ಳಿ : ವಿಶ್ವವಿಖ್ಯಾತ ಹಂಪಿಯನ್ನು ವೀಕ್ಷಣೆ ಮಾಡುವುದಕ್ಕೆ ಬಂದಿದ್ದ ವಿದೇಶಿ ಪ್ರಜೆ ಪ್ರಾನ್ಸ್ ಮೂಲದ ಬ್ರುನೊ ರೋಜರ್ (52) ಹಂಪಿ ಗುಡ್ಡ ಏರಲು ತೆರಳಿದಾಗ ಆತನಿಗೆ ಬಂಡೆ ಎದೆಗೆ ತಗುಲಿದಾಗ ಮೇಲಿನಿಂದ ಕೆಳಕ್ಕೆ ಬಿದ್ದಿದ್ದರಿಂದ ಕಾಲು ಮುರಿದು ಗಾಯಗೊಂಡ ವಿದೇಶಿ ವ್ಯಕ್ತಿ.
ಆಗ ಅಲ್ಲಿನ ವ್ಯಕ್ತಿ ನೋಡಿ ಇ.ಎಂ.ಆರ್.ಐ.ಹೆಲ್ತ್ ಗ್ರೀನ್ ಸರ್ವೀಸ್ ಸಂಸ್ಥೆಯ 108 ಗೆ ಕರೆ ಮಾಡಿದರು. ಸರಿಯಾದ ಸಮಯಕ್ಕೆ ಸ್ಥಳಕ್ಕೆ 108 ಅಂಬುಲೆನ್ಸ್ ಬಂದು ಸಿಬ್ಬಂದಿಗಳು ಆ ವಿದೇಶಿ ವ್ಯಕ್ತಿಗೆ ಪ್ರಥಮ ಚಿಕಿತ್ಸೆ ನೀಡಿ ಹೊಸಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ 108 ಅಂಬುಲೆನ್ಸ್ ನಲ್ಲಿಯೇ ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದರು.
ಜೀವ ಅಪಾಯದಿಂದ ವಿದೇಶಿ ವ್ಯಕ್ತಿ ಪಾರಗಿದ್ದಾನೆ. ಈ ಘಟನೆ ವಿಜಯನಗರ ಜಿಲ್ಲೆ ಹೊಸಪೇಟೆ ತಾಲ್ಲೂಕಿನ ಹಂಪಿಯಲ್ಲಿ ನಡೆದಿದೆ. ನಂತರ ಆ ವಿದೇಶಿ ಪ್ರಜೆ ಪ್ರಾನ್ಸ್ ಮೂಲದ ಬ್ರುನೊ ರೋಜರ್ ರವರು ನೋವಿನಿಂದ ಬಳಲುತ್ತಿದ್ದರು ಕೂಡ ಆ ಸಂದರ್ಭದಲ್ಲಿ ಇ.ಎಂ.ಆರ್.ಐ.ಹೆಲ್ತ್ ಗ್ರೀನ್ ಸರ್ವೀಸ್ ಸಂಸ್ಥೆಗೆ ಮತ್ತು ಸಿಬ್ಬಂದಿಗಳಾದ ಇ.ಎಂ.ಟಿ.ಲಿಂಗರಾಜ್, ಚಾಲಕ ಮಂಜುನಾಥ ರವರ ಸೇವೆ ಮೆಚ್ಚಿ ಕೃತಜ್ಞತೆ ತಿಳಿಸಿದರು.