LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
State News

ನಮ್ಮ ಸಂಸ್ಕೃತಿ ಬಿಂಬಿಸುವ ಚಿತ್ರಕಲೆಗಳು ಹೆಚ್ಚು ಬರಬೇಕು

ಬೆಂಗಳೂರು: ನಮ್ಮ ನಾಡಿನ ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ಬಿಂಬಿಸುವಂತಹ ಚಿತ್ರಕಲೆಗಳು ಹೆಚ್ಚು ಬರಬೇಕು ಎಂದು ನಟ ಸುಚೇಂದ್ರ ಪ್ರಸಾದ್ ತಿಳಿಸಿದರು. ನಗರದ ವರ್ಣ ಆರ್ಟ್ ಗ್ಯಾಲರಿಯಲ್ಲಿ ಕರ್ನಾಟಕ ಆರ್ಟ್ಸ್ ಫೌಂಡೇಶನ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಆಯೋಜನೆಗೊಂಡಿದ್ದ ಎರಡು ದಿನದ ಆತ್ಮಾನಂದರ ಚಿತ್ರಕಲಾ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಹೀಗೆ ಚಿತ್ರಕಲೆಗಳ ಮೂಲಕವು ನಮ್ಮ ಸಂಸ್ಕೃತಿಯ ವಿಶೇಷತೆಗಳನ್ನು ತಿಳಿಸಿದ್ದೇ ಆದಲ್ಲಿ ಜನಸಾಮಾನ್ಯರು ಶಿಘ್ರವೇ ಇವುಗಳತ್ತ ಒಲವನ್ನು ಬೆಳೆಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.

 

ಆತ್ಮಾನಂದ ಅವರು ತಮ್ಮದೇ ಆದಂತ ಶೈಲಿಯಲ್ಲಿ ನಾಡಿನ ಸಂಸ್ಕೃತಿಯನ್ನು ಉಳಿಸುವ ನಿಟ್ಟಿನಲ್ಲಿ ಚಿತ್ರಕಲೆಗಳಿಗೆ ಜೀವ ತುಂಬಿರುವುದು ವಿಶೇಷವೇ ಸರಿ. ಯಾವುದಾದರೂ ಒಂದು ಚಿತ್ರದ ಮೂಲಕ ಒಂದು ವಿಷಯವನ್ನು ವ್ಯಕ್ತಪಡಿಸುವ ವೈಖರಿ ಭಿನ್ನತೆಯಿಂದ ಕೂಡಿದೆ. ಆತ್ಮಾನಂದರ ಚಿತ್ರಗಳು ಅವರ ಮೂಡಿಸುವಂತಹ ಗೆರೆಗಳು ಬಹಳ ಅದ್ಭುತವಾಗಿ ಮೂಡಿಬಂದಿದೆ ಎಂದು ತಿಳಿಸಿದರು.

 news_1781803452_1_846.webp

 

ಕರ್ನಾಟಕ ವಿಧಾನ ಪರಿಷತ್ ಸದಸ್ಯ ಕೇಶವ್ ಪ್ರಸಾದ್ ಮಾತನಾಡಿದ ಅವರು ಆತ್ಮಾನಂದರ ಚಿತ್ರಕಲಾ ಪ್ರದರ್ಶನಕ್ಕೆ ನನ್ನನ್ನ ಆಹ್ವಾನಿಸಿದಾಗ ಯಾವುದು ನೋಡಿರಲಿಲ್ಲ. ಪ್ರಪ್ರಥಮವಾಗಿ ಚಿತ್ರಕಲಾ ಪ್ರದರ್ಶನವನ್ನು ನೋಡುವಂತ ಅವಕಾಶ ಮಾಡಿಕೊಟ್ಟರು. ಮತ್ತೆ ಆತ್ಮಾನಂದ ರವರು ರಾಜಕೀಯವಾಗಿ ಅವರನ್ನು ನೋಡಿದ್ದೀನಿ, ಆದರೆ ಅವರಲ್ಲಿ ತರಹದ ಒಂದು ಕಲೆ ಇದೆ ಅನ್ನುವುದನ್ನು ನೋಡಿ ಆಶ್ಚರ್ಯವಾಗಿದೆ. ಅದ್ಭುತವಾಗಿ ಕಲಾಕೃತಿಗಳನ್ನು ರಚಿಸಿರುವುದು ಶ್ಲಾಘನೀಯ ಎಂದು ಹೇಳಿದರು.

 

ಸಾಮಾಜಿಕ ಕಾರ್ಯಕರ್ತ ವಾದಿರಾಜ್ ಅವರು ಮಾತನಾಡಿ, ಆತ್ಮಾನಂದರು ಕಳೆದ 20 ವರ್ಷಗಳಿಂದ ಚಿರಪರಿಚಿತರಾಗಿದ್ದು, ಪ್ರಸ್ತುತ ರಾಜಕೀಯ ಕ್ಷೇತ್ರದಲ್ಲಿ ಇದ್ದರೂ ಕೂಡ ಇವತ್ತು ಕಲೆಯನ್ನು ಅವರು ಕಲಿತ ಕಲೆಯನ್ನು ಮರೆಯದಿರುವುದು ಅಚ್ಚರಿ ಮೂಡಿಸುತ್ತದೆ ಎಂದರು.

 

ನಂತರದಲ್ಲಿ ಕರ್ನಾಟಕ ಲಲಿತ ಕಲಾ ಅಕಾಡೆಮಿಯ ಅಧ್ಯಕ್ಷ .. ಕುಮಾರ್ ಮಾತನಾಡಿ, ರೇಖೆಗಳು ಕೇಕೆ ಹೆಬ್ಬಾರ್ ಅವರ ರೇಖಾಚಿತ್ರಗಳನ್ನ ನೆನಪಿಸುತ್ತಿವೆ. ಇನ್ನು ಹಡಪದ ಅವರ ರೇಖೆಗಳನ್ನ ಮರು ಸೃಷ್ಟಿಸಿವೆ ಆತ್ಮಾನಂದ ಕೂಡ ಹಡ್ಪದವರ ಜೆಡಿಎಸ್ ಮಣಿ ಅವರ ಶಿಷ್ಯ ಎಂದು ಹೇಳಿದರು.ಮತ್ತು ಜನಪದ ಗಾಯಕ ಅಪ್ಪೆಗೆರೆ ತಿಮ್ಮರಾಜು ಸಹ ಮಾತನಾಡಿದರು.

 news_1781803452_0_761.webp

 

ಇದೇ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಆರ್. ಚಂದ್ರಶೇಖರ್, ಜನಪದ ಗಾಯಕ ಅಪ್ಪೆಗೆರೆ ತಿಮ್ಮರಾಜು, ಕರ್ನಾಟಕ ಆರ್ಟ್ಸ್ ಫೌಂಡೇಶನ್ ಸಂಸ್ಥೆಯ ಅಧ್ಯಕ್ಷೆ ಸರೋಜಾ, ಖಜಾಂಚಿ ದೀಪಕ್, ಕಲಾವಿದ ಲಿಂಗದೇವರು, ಅಶೋಕ್, ಲಿಂಗರಾಜು, ಗೌರಿ ಶಂಕರ್, ಡಾ. ಈಶ್ವರ್ ಸಿರಿಗೇರಿ, ದೇವಣ್ಣ, ಎಲ್ಲಾ ಪದಾಧಿಕಾರಿಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

 

 

ಒಬ್ಬ ಕಲೆಗಾರ ತನ್ನ ರಚಿತ ಚಿತ್ರಗಳಿಂದ ಸಮಾಜಕ್ಕೆ ಯಾವ ತರಹದ ಸಂದೇಶ ಕೊಡುತ್ತೇನೆ ಎಂಬುದು ಬಹುಮುಖ್ಯ. ನಿಟ್ಟಿನಲ್ಲಿ ಆತ್ಮಾನಂದರ ತುಂಬಾ ಅದ್ಭುತವಾದಂತಹ ಚಿತ್ರಗಳನ್ನು ರಚಿಸಿ ವಿಭಿನ್ನತೆ ಮೆರೆದಿದ್ದಾರೆ.

- ಸುಚೇಂದ್ರ ಪ್ರಸಾದ್, ಖ್ಯಾತ ಚಲನಚಿತ್ರ ನಟ

 

ಆತ್ಮಾನಂದರು ಒಬ್ಬ ಕಲಾವಿದ ಹೌದು, ರಾಜಕೀಯವಾಗಿ ಬಹಳ ಅಚ್ಚುಕಟ್ಟಾಗಿ ಸಂಘಟನೆಯಲ್ಲಿ ತೊಡಗಿದ ಸಂಸ್ಥೆಯು ತರದ ಹೆಚ್ಚು ಕೆಲಸಗಳನ್ನು ಮಾಡುತ್ತಾ ಕಲಾವಿದರಿಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಸರ್ಕಾರವು ಕಲೆ, ಸಂಸ್ಕೃತಿ ನಾಡಿನಲ್ಲಿ ಚೆನ್ನಾಗಿದರೆ, ರಾಜ್ಯ ಸುಭಿಕ್ಷವಾಗಿ, ಮತ್ತೆ ಕಲಾವಿದರಿಗೆ ಸರ್ಕಾರಗಳು ಹೆಚ್ಚು ಒತ್ತನ್ನು ಕೊಡಬೇಕು.

 ಕೇಶವ್ ಪ್ರಸಾದ್, ಸದಸ್ಯರು, ಕರ್ನಾಟಕ ವಿಧಾನ ಪರಿಷತ್ತು.

 

ಆತ್ಮಾನಂದರ ರೇಖೆಗಳು, ರಾಜಕೀಯದ ಜೊತೆಗೆ ರೇಖಾಚಿತ್ರಗಳನ್ನು ಇನ್ನಷ್ಟು ಹೆಚ್ಚು ಹೆಚ್ಚು ಅಂತರಾಷ್ಟ್ರೀಯ ಮಟ್ಟದಲ್ಲಿ ಚಿತ್ರಕಲಾ ಪ್ರದರ್ಶನಗಳನ್ನು ಕಲೆ ಮತ್ತು ಕಲಾವಿದನಾಗಿ ಬೆಳೆಯಬೇಕಿದೆ.

Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಯಶಸ್ವಿಯಾಗಿ ನಡೆದ ಜಿಂದಾಲ್ ಸ್ಟೀಲ್ ಸಿಟಿ ರನ್ 2026ಹವಾಮಾನ-ಸಹನಶೀಲ ಕೃಷಿ ಮತ್ತು ಶಾಸನಾತ್ಮಕ ಸಾಮರ್ಥ್ಯ ನಿರ್ಮಾಣ ಕುರಿತು ಎನ್ಎಫ್ಪಿಆರ್ಸಿ ಕಾರ್ಯಾಗಾರ ಆಯೋಜನೆಕೊಪ್ಪಳದಲ್ಲಿ ಆ.04ಕ್ಕೆ ಬೃಹತ್ ಕಟ್ಟಡ ಕಾರ್ಮಿಕರ ಪ್ರತಿಭಟನಾ ಮೆರವಣಿಗೆ : ಪೋಸ್ಟರ್ ಬಿಡುಗಡೆ'ಕಸಾಪ ಘನತೆ, ಗೌರವ ಎತ್ತಿ ಹಿಡಿದು ಪರಂಪರೆ ಉಳಿಸೋಣ: ಜಾಣಗೆರೆಸಾಮಾಜಿಕ ಬದಲಾವಣೆಗೆ ಪತ್ರಿಕೆಗಳ ಪಾತ್ರ ಮಹತ್ವದ್ದು - ಮೊಹಮ್ಮದ್ ಜುಬೇರಗೆಳೆತನ: ಮಾನವೀಯತೆಯ ಮಹಾಕಾವ್ಯಕೊತ್ತಲಚಿಂತ ಗ್ರಾಮದಲ್ಲಿ ಮಳೆಗಾಗಿ ಅಖಂಡ ಭಜನಾ ಸಪ್ತಾಹಕಳಪೆ ಆಹಾರ ಮಾರಾಟ: ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಸಾರ್ವಜನಿಕರ ಆಕ್ರೋಶಸಮಾಜಮುಖಿ ವೃತ್ತಿಪರರನ್ನಾಗಿ ರೂಪಿಸುವುದು ಶಿಕ್ಷಣದ ನಿಜವಾದ ಉದ್ದೇಶ1.40 ಕೋಟಿ ವೆಚ್ಚದ ರಸ್ತೆ–ಚರಂಡಿ ಕಾಮಗಾರಿಗಳಿಗೆ ಚಾಲನೆ