LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
State News

ಬಕ್ರೀದ್ಗೆ ಕುರ್ಬಾನಿ ನೀಡುವ ಕುರಿಗಳಿಗೆ ಭಾರಿ ಬೇಡಿಕೆ

ವರದಿ : ಸಂಧ್ಯಾ ಪ್ರಸಾದ್ ಪಿ ವಿ.

ಮುಸ್ಲಿಮರ ತ್ಯಾಗ ಮತ್ತು ಬಲಿದಾನದ ಪ್ರತೀಕವಾಗಿರುವ ಬಕ್ರೀದ್ಹಬ್ಬಇನ್ನು ಒಂದು ವಾರ ಮಾತ್ರ ಬಾಕಿ ಇದೆ. ಸಂದರ್ಭದಲ್ಲಿ ಸರ್ವಜನಾಂಗ ಶಾಂತಿಯ ತೋಟವಾದ ಕರ್ನಾಟಕದಲ್ಲಿಯೂ  ಆಡು, ಕುರಿ, ಟಗರುಗಳ ವ್ಯಾಪಾರ ಭಾರಿ ಬೇಡಿಕೆ ಪಡೆದಿದ್ದು,  ರಾಜ್ಯದ ಬಹುತೇಕ ಜಾನುವಾರು ಮಂಡಿಗಳಲ್ಲಿ ದರ ಹೆಚ್ಚಳವಾಗಿದೆಯಲ್ಲದೇ,  ಕಡಗ ತೊಟ್ಟ ಟಗರು,   ಹಾಗೂ ಮೇಕೆಗಳಿಗೆ ಭಾರಿ ಡಿಮ್ಯಾಂಡ್ ಬಂದಿದೆ. ಆದ್ದರಿಂದ ಕೆಲವು ಕುರಿ, ಟಗರು ಮತ್ತು ಮೇಕೆಗಳು ಒಂದು ಲಕ್ಷಕ್ಕೂ ಅಧಿಕ ಬೆಲೆಗೆ ಬಿಕರಿಯಾಗಿದ್ದು, ಅವುಗಳ ಮಾಹಿತಿ ಇಲ್ಲಿದೆ ನೋಡಿ...

 

ತ್ಯಾಗ ಬಲಿದಾನದ ಸಂಕೇತವಾದ ಮುಸಲ್ಮಾನ ಸಮುದಾಯದ   ಪವಿತ್ರ ಹಬ್ಬವೆನಿಸಿಕೊಂಡ ಬಕ್ರೀದ್ ಹಬ್ಬಕ್ಕೆ   ಕ್ಷಣಗಣನೆ ಆರಂಭವಾಗಿದೆ. ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಮುಸಲ್ಮಾನರು ಬಡ ಜನರಿಗೆ ಬಟ್ಟೆ, ಆಹಾರ ಧಾನ್ಯಗಳು, ಮಾಂಸವನ್ನು ದಾನ ನೀಡುತ್ತಾರೆ. ಬಕ್ರೀದ್ ಹಬ್ಬಕ್ಕೆ ವಿಶೇಷ ಮಾಂಸಾಹಾರ ತಯಾರಿಸಿ ಅದನ್ನು ನೆಂಟರಿಷ್ಟರು ಹಾಗೂ ಬಡವರಿಗೆ ನೀಡುತ್ತಾರೆ. ಬಗೆಬಗೆಯ ಭಕ್ಷ್ಯ ತಯಾರಿಕೆಯ ಹಿನ್ನೆಲೆಯಲ್ಲಿ  ರಾಜಧಾನಿ ಬೆಂಗಳೂರಿನಿಂದ ಕೂಗಳತೆ ದೂರದಲ್ಲಿರುವ ಚಿಕ್ಕಬಳ್ಳಾಪುರ ತಾಲ್ಲೂಕಿನ ಪೆರೇಸಂದ್ರ ಕುರಿ ಸಂತೆ ,ಮಂಚೆನಹಳ್ಳಿ ಕುರಿ ಸಂತೆ  ದೊಡ್ಡಬಳ್ಳಾಪುರದ ಮೇಳೆಕೋಟೆ ಕುರಿ ಸಂತೆ  ಸೇರಿದಂತೆ ಸುತ್ತಮುತ್ತಲಿನ  ಕುರಿ ಸಂತೆಯಲ್ಲಿ ಕುರಿಗಳ ವ್ಯಾಪಾರ  ಭರ್ಜರಿಯಾಗಿ ನಡೆದಿದೆ.

ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಸಾಮಾನ್ಯ ಬೆಲೆಗಿಂತ ಹೆಚ್ಚಿನ ಬೆಲೆಗೆ ಮಾರಾಟವಾಗುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿತ್ತು.news_1779126399_1_134.webp

 

ಕಳೆದ ವರ್ಷಕ್ಕೆ ಹೋಲಿಸಿದರೆ, ದರಗಳು ಪ್ರತಿ ಕಿಲೋಗ್ರಾಂಗೆ 100 ರಿಂದ 150 ರೂ.ಗಳಷ್ಟು ಹೆಚ್ಚಾಗಿದೆ. 

ತೂಕ, ತಳಿ ಮತ್ತು ಆಕಾರಕ್ಕೆ ತಕ್ಕಂತೆ ಟಗರು ಹಾಗೂ ಮೇಕೆಗಳು ಕನಿಷ್ಠ ₹15,000 ದಿಂದ ₹1.5 ಲಕ್ಷಕ್ಕೂ ಹೆಚ್ಚಿನ ಬೆಲೆಗೆ ಬಿಕರಿಯಾಗುತ್ತಿವೆ. ಹಬ್ಬದ ಹಿನ್ನೆಲೆಯಲ್ಲಿ ಗ್ರಾಮೀಣ ಆರ್ಥಿಕತೆಗೂ ಭರ್ಜರಿ ಉತ್ತೇಜನ ದೊರೆತಿದೆ

 ವರ್ಷವಿಡೀ ಕಷ್ಟಪಟ್ಟು ಸಾಕಿದ ಕುರಿಗಳನ್ನು ಬಕ್ರಿದ್ಹಿನ್ನಲೆ ದುಬಾರಿ ಬೆಲೆಗೆ ಮಾರುವ ಮೂಲಕ ರೈತರು ಮಂದಹಾಸ ಬೀರಿದರು.

ಕುರಿ ಸಂತೆಯಲ್ಲಿ ಸಾಂಪ್ರದಾಯಿಕ ಕುರಿ , ನೂರಾರು ಜಾನುವಾರುಗಳು ಕಂಡುಬರುತ್ತವೆ.ಕುರಿ ಮಾರಾಟಗಾರ ಸೈಯದ್  ಅಲಿ  ಎಂಬುವವರು ಮಾತನಾಡಿ, ಅಮೀನಗಡ ತಳಿಯ ಬೆಲೆ ಪ್ರಸ್ತುತ ಪ್ರತಿ ಕೆಜಿಗೆ 750 ರೂ.ಗಳಾಗಿದೆ. ಅತ್ಯಂತ ದುಬಾರಿ ತಳಿಗಳಲ್ಲಿ ಒಂದೆಂದು ಪರಿಗಣಿಸಲಾದ ಬನ್ನೂರ್ ಕುರಿಯನ್ನು ಪ್ರತಿ ಕೆಜಿಗೆ 900 ರೂ.ಗಳಿಗೆ ಮಾರಾಟ ಮಾಡಲಾಗುತ್ತಿದೆ. ಇನ್ನು ಬೀಟಲ್ ಮತ್ತು ಯೆಲ್ಗಾ ಕುರಿ ಬೆಲೆ ಪ್ರತಿ ಕೆಜಿಗೆ 650 ರೂ.ಗಳಾಗಿದ್ದರೆ, ಆಂಧ್ರಪ್ರದೇಶದ ಚೆನ್ನೂರಿನ ಸ್ಥಳೀಯ ತಳಿ ಕುರಿಗಳು ಪ್ರತಿ ಕೆಜಿಗೆ 550 ರೂ.ಗಳಿಗೆ ಲಭ್ಯವಿದೆ. ಬೆಲೆಗಳು ಪ್ರತಿಯೊಂದು ತಳಿಯ ಗುಣಮಟ್ಟ, ಗಾತ್ರ ಮತ್ತು ಮೂಲವನ್ನು ಪ್ರತಿಬಿಂಬಿಸುತ್ತವೆ, ಸ್ಥಳೀಯ ಮತ್ತು ಆಂಧ್ರ ಮೂಲದ ಕುರಿಗಳು ಸಾಮಾನ್ಯವಾಗಿ ಕಡಿಮೆ ಬೆಲೆಯಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.

 

ಸ್ಥಳೀಯ ತಳಿಗಳ ಹೊರತಾಗಿ, ಆಸ್ಟ್ರೇಲಿಯಾದ ಕುರಿಗಳಿಗೂ ಬೇಡಿಕೆಯಿದೆ. ಇವುಗಳನ್ನು ಮಾರಾಟ ಮಾಡುವ ಪೀರ್  ಬಾಷಾ, "ಕಳೆದ ವರ್ಷ ಭಾರೀ ಬೇಡಿಕೆ ಇದ್ದ ಕಾರಣ ಇವುಗಳನ್ನು ಆಸ್ಟ್ರೇಲಿಯಾದ ವ್ಯಾಪಾರ ಸಂಸ್ಥೆಗಳಿಂದ ಖರೀದಿಸಲಾಗಿದೆ. ಇವುಗಳನ್ನು 85,000 ರೂ.ಗೆ ಮಾರಾಟ ಮಾಡಲಾಗಿತ್ತು ಮತ್ತು ವರ್ಷ ಜನರು 1 ಲಕ್ಷ ರೂ.ಗೆ ಖರೀದಿಸಲು ಸಿದ್ಧರಿದ್ದಾರೆ" ಎಂದು ಹೇಳಿದರು.

news_1779126399_2_883.webp

 

ಹಗಲು, ರಾತ್ರಿಯೆನ್ನದೇ ಕುರಿ, ಆಡು, ಹೋತ, ಟಗರುಗಳನ್ನು ಖರೀದಿ ಮಾಡಲು ಮುಸ್ಲಿಂ ಸಮುದಾಯದವರು ಆಗಮಿಸುತ್ತಿದ್ದು, ಭಾರಿ ಡಿಮ್ಯಾಂಡ್ಕ್ರಿಯೇಟ್ಆಗಿದೆ. ಇನ್ನು ಕುರಿ, ಮೇಕೆ ಸಾಕಣೆ ಮಾಡಿದವರಿಗೂ ಈಗ ಭರ್ಜರಿ ಲಾಭವೂ ಆಗುತ್ತಿದೆ.

 

ನೆರೆಯ ತಮಿಳುನಾಡು, ಆಂಧ್ರ ಸೇರಿದಂತೆ ರಾಜ್ಯದ ನಾನಾ ಭಾಗಗಳಿಂದ ರೈತರು ಮತ್ತು ಕುರಿಗಾಯಿಗಳು ಕುರಿ ಮತ್ತು ಮೇಕೆಗಳನ್ನು ಇಲ್ಲಿಗೆ ತಂದು ಮಾರಾಟ ಮಾಡುತ್ತಿದ್ದಾರೆ. ಕುರಿ ಖರೀದಿಸಲು   ಮುಸಲ್ಮಾನರು, ಹಾಗೂ ವ್ಯಾಪಾರಸ್ಥರು ಸೇರಿದಂತೆ ನೆರೆಯ ಜಿಲ್ಲೆಗಳಿಂದಲೂ ಬಂದು ವ್ಯಾಪಾರ ತೊಡಗಿದ್ದಾರೆ.

ಒಟ್ಟನಲ್ಲಿ  ಇಂದಿನ ಕುರಿಗಳ ಸಂತೆಯಲ್ಲಿ ಲಕ್ಷಾಂತರ ರೂಪಾಯಿಯ ವ್ಯಾಪಾರ ವಹಿವಾಟು ನಡೆದಿದ್ದು, ಇನ್ನುಒಂದು ವಾರಗಳ ಕಾಲ ಸಂತೆ ಇರಲಿದೆ.

Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಯಶಸ್ವಿಯಾಗಿ ನಡೆದ ಜಿಂದಾಲ್ ಸ್ಟೀಲ್ ಸಿಟಿ ರನ್ 2026ಹವಾಮಾನ-ಸಹನಶೀಲ ಕೃಷಿ ಮತ್ತು ಶಾಸನಾತ್ಮಕ ಸಾಮರ್ಥ್ಯ ನಿರ್ಮಾಣ ಕುರಿತು ಎನ್ಎಫ್ಪಿಆರ್ಸಿ ಕಾರ್ಯಾಗಾರ ಆಯೋಜನೆಕೊಪ್ಪಳದಲ್ಲಿ ಆ.04ಕ್ಕೆ ಬೃಹತ್ ಕಟ್ಟಡ ಕಾರ್ಮಿಕರ ಪ್ರತಿಭಟನಾ ಮೆರವಣಿಗೆ : ಪೋಸ್ಟರ್ ಬಿಡುಗಡೆ'ಕಸಾಪ ಘನತೆ, ಗೌರವ ಎತ್ತಿ ಹಿಡಿದು ಪರಂಪರೆ ಉಳಿಸೋಣ: ಜಾಣಗೆರೆಸಾಮಾಜಿಕ ಬದಲಾವಣೆಗೆ ಪತ್ರಿಕೆಗಳ ಪಾತ್ರ ಮಹತ್ವದ್ದು - ಮೊಹಮ್ಮದ್ ಜುಬೇರಗೆಳೆತನ: ಮಾನವೀಯತೆಯ ಮಹಾಕಾವ್ಯಕೊತ್ತಲಚಿಂತ ಗ್ರಾಮದಲ್ಲಿ ಮಳೆಗಾಗಿ ಅಖಂಡ ಭಜನಾ ಸಪ್ತಾಹಕಳಪೆ ಆಹಾರ ಮಾರಾಟ: ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಸಾರ್ವಜನಿಕರ ಆಕ್ರೋಶಸಮಾಜಮುಖಿ ವೃತ್ತಿಪರರನ್ನಾಗಿ ರೂಪಿಸುವುದು ಶಿಕ್ಷಣದ ನಿಜವಾದ ಉದ್ದೇಶ1.40 ಕೋಟಿ ವೆಚ್ಚದ ರಸ್ತೆ–ಚರಂಡಿ ಕಾಮಗಾರಿಗಳಿಗೆ ಚಾಲನೆ