LIVE TV StateNationalPoliticsCrimeEntertainmentSportsEducationFINANCE & TAXATION
Districts Hubballi

"ಸಂಗಮ ಸಿರಿ" ಪ್ರಶಸ್ತಿಗೆ ಡಾ.ದಯಾನಂದ ನೂಲಿ ಆಯ್ಕೆ

ಹುಬ್ಬಳ್ಳಿ: ಹಿರಿಯ ಸಾಹಿತಿ ಡಾ. ಸಂಗಮೇಶ ಹಂಡಿಗಿ ಅವರ  ಸ್ಮರಣೆಯಲ್ಲಿ  ನೀಡುವ "ಸಂಗಮ ಸಿರಿ "ರಾಜ್ಯ ಮಟ್ಟದ ಪ್ರಶಸ್ತಿಯು ಈ ವರ್ಷ ವಚನ ಸಾಹಿತ್ಯ ಸಂಶೋಧಕರಿಗೆ ನೀಡಲಾಗುತ್ತಿದ್ದು ಈ ಪ್ರಶಸ್ತಿ ಬೆಳಗಾವಿ ಜಿಲ್ಲೆ ಚಿಕ್ಕೋಡಿಯ ಡಾ. ದಯಾನಂದ ನೂಲಿ ಅವರಿಗೆ ನೀಡಲಾಗುತ್ತಿದೆ. ಈ ಪ್ರಶಸ್ತಿಯು 10 ಸಾವಿರ ರೂ.ನಗದು ಹಾಗೂ ಪ್ರಶಸ್ತಿ ಫಲಕ ಒಳಗೊಂಡಿದೆ. ಡಾ. ದಯಾನಂದ ನೂಲಿ ಅವರು ಮೂಲತಃ ವೈದ್ಯಕೀಯ  ಕ್ಷೇತ್ರದಲ್ಲಿ ಶಸ್ತ್ರಚಿಕಿತ್ಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.ಅವರು ವಚನಗಳನ್ನು ವೈಜ್ಞಾನಿಕವಾಗಿ ಇರುವುದರ ಕುರಿತು "ಶರಣರ ಶಿವಯೋಗ " ಎಂಬ ಕೃತಿಯಲ್ಲಿ ವಚನಗಳನ್ನು ವೈಜ್ಞಾನಿಕ ಹಿನ್ನೆಲೆಯಲ್ಲಿ ಅಧ್ಯಯನ ಮಾಡಿದ್ದಾರೆ. ಇವರ "ವಚನಗಳಲ್ಲಿ ಆರೋಗ್ಯಕರ ಪರಿಕಲ್ಪನೆ", "ಮರುಳ ಶಂಕರ ದೇವರು ಅನುಭವ ಯಾತ್ರೆ" ಎಂಬ ಶರಣರ ವಚನಗಳ ವೈಜ್ಞಾನಿಕ ಹಿನ್ನೆಲೆಯಲ್ಲಿ ಅಧ್ಯಯನ ಮಾಡಿದ್ದು ಗಮನಾರ್ಹ . ಡಾ.ಪ್ರಭಾಕರ ಕೋರೆ ಅವರ ಕುರಿತು "ಪ್ರಭಾಂಕಲಿ " "ನೆಹಲ್ "ಎಂಬ ಕಥಾ ಸಂಕಲನವನ್ನು ಹೊರತಂದಿದ್ದಾರೆ. ಸಾಹಿತಿಕ ಹಾಗೂ ವೈದ್ಯಕೀಯ ಹಲವು ಲೇಖನಗಳನ್ನು ಪ್ರಕಟಿಸಿದ್ದಾರೆ ರಾಷ್ಟ್ರೀಯ, ಅಂತರಾಷ್ಟ್ರೀಯ ಸಮ್ಮೇಳನದಲ್ಲಿ ಪ್ರಬಂಧಗಳನ್ನು ಮಂಡಿಸಿದ್ದಾರೆ.ರಾಜ್ಯದ ಒಟ್ಟು 36 ಜನ ಸಂಶೋಧಕರು ಹೆಸರು ಪ್ರಶಸ್ತಿ ಆಯ್ಕೆಗೆ ಬಂದಿದ್ದವು. ಡಾ.ನೂಲಿ ಅವರಿಗೆ ಈ ವರ್ಷ ನವೆಂಬರ್ ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ "ಸಂಗಮ ಸಿರಿ" ಪ್ರಶಸ್ತಿಯನ್ನು ಪ್ರಧಾನ ಮಾಡಲಾಗುವುದು ಎಂದು ಡಾ. ಸಂಗಮೇಶ ಹಂಡಿಗಿ  ಸಾಹಿತ್ಯ ಪ್ರತಿಷ್ಠಾನದ ಅಧ್ಯಕ್ಷ ಜಿ.ಬಿ.ಗೌಡಪ್ಪಗೊಳ, ಗೌರವಾಧ್ಯಕ್ಷ ಗಣಪತಿ ಗಂಗೊಳ್ಳಿ, ಕಾರ್ಯಕ್ರಮ ಸಂಯೋಜಕ ಡಾ. ಪ್ರಭು ಗಂಜಿಹಾಳ ತಿಳಿಸಿದ್ದಾರೆ.

 

Rakesh V
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮಲ್ಲಿಕಾರ್ಜುನ ಖರ್ಗೆ ಅವರಿಂದ ಇಂತಹ ಪದಬಳಕೆಯನ್ನು ನಿರೀಕ್ಷಿಸಿರಲಿಲ್ಲ – ಬಿಜೆಪಿ ಮುಖಂಡ ಪ್ರಭಾಕರ್ ಜಿಲ್ಲಾ ಆಸ್ಪತ್ರೆಗೆ ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ ದಿಢೀರ್ ಭೇಟಿಆರ್.ವಿ.ಐ.ಎಂ ನಲ್ಲಿ 2024–26ನೇ ಸಾಲಿನ ಎಂಬಿಎ ಮತ್ತು ಪಿ ಜಿ ಡಿ ಬಿ ಎ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ;ಐಸಿಎಫ್ಎಐ ಕಾನೂನು ಶಾಲೆಯಲ್ಲಿ ಭಾರತದ ನಾಲ್ಕು ಕಾರ್ಮಿಕ ಸಂಹಿತೆಗಳ ಕುರಿತು ರಾಷ್ಟ್ರೀಯ ಸಮ್ಮೇಳನ ಕಪ್ಪು ಪಟ್ಟಿ ಧರಿಸಿ ವಾಲ್ಮೀಕಿ ಜಯಂತಿ ಆಚರಣೆಏಷ್ಯನ್‌ ಗೇಮ್ಸ್‌ ಪದಕ ವಿಜೇತ ಕೆಐಐಟಿ, ಕಿಸ್‌ ಸಾಧಕರಿಗೆ ಸನ್ಮಾನಕೊಪ್ಪಳದ ಸಿರಸಪ್ಪಯ್ಯನಮಠ ಬಳಿಯ ರಸ್ತೆಯಲ್ಲಿ ಹಂಪ್ಸ್ ಗಳನ್ನು ನಿರ್ಮಿಸಲು ಆಗ್ರಹಿಸಿ ಮನವಿ.  ಮೊಳಕಾಲ್ಮೂರಿಗೆ ಹೊಸ ನಾಯಕತ್ವದ ಅಗತ್ಯ ಕೊಪ್ಪಳ ; ಎಸ್.ಐ.ಆರ್ ರದ್ದುಪಡಿಸಲು ಆಗ್ರಹಿಸಿ ಬೃಹತ್ ಪ್ರತಿರೋಧ ‘ತಿರಂಗಾ ಯಾತ್ರೆ’ಡಂಬಳ ಗ್ರಾಮದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವೀರ ವನಿತೆ ಕಿತ್ತೂರು ರಾಣಿ ಚೆನ್ನಮ್ಮ ನವರ ಜಯಂತಿ ಆಚರಣೆ