LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
State News

ಪತ್ರಿಕೋದ್ಯದಲ್ಲಿ ನೈತಿಕತೆ ತರಲು ಮಾಧ್ಯಮ ಆಯೋಗ ಅಥವಾ ಒಂಬುಡ್ಸ್ ಮನ್ ರಚಿಸಿ

ಬೆಂಗಳೂರು:  ಮುದ್ರಣ. ದೂರದರ್ಶನ, ಡಿಜಿಟಲ್ ಸುದ್ದಿ, ಆನ್ಲೈನ್ ಪ್ರಕಟಣೆಗಳು ಮತ್ತು ಸಾಮಾಜಿಕ ಮಾಧ್ಯಮ ಸೇರಿದಂತೆ ಎಲ್ಲಾ ವೇದಿಕೆಗಳಲ್ಲಿ ಮಾಧ್ಯಮ ವೃತ್ತಿಪರರ ನಡವಳಿಕೆಯಲ್ಲಿ ಹೊಣೆಗಾರಿಕೆಯನ್ನು ಮೇಲ್ವಿಚಾರಣೆ ಮಾಡಲು ಮಾಧ್ಯಮ ಆಯೋಗ ಅಥವಾ ಒಂಬುಡ್ಸ್ ಮನ್ ಸ್ಥಾಪಿಸಬೇಕೆಂದು ಹಿರಿಯ ಪತ್ರಕರ್ತರ ವೇದಿಕೆ ಅಧ್ಯಕ್ಷ ಎಂ.. ಪೊನ್ನಪ್ಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಮಾಡಿದ್ದಾರೆ.

ನಗರದಲ್ಲಿಂದು ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಿರುವ ಎಂ.. ಪೊನ್ನಪ್ಪ, ಮಾಧ್ಯಮ ಕ್ಷೇತ್ರದ ಮೇಲ್ವಿಚಾರಣೆ ಮಾಡಲು ಕಾನೂನು, ಶೈಕ್ಷಣಿಕ ಮತ್ತು ತಂತ್ರಜ್ಞಾನ ಕ್ಷೇತ್ರಗಳ ಪ್ರಾತಿನಿಧ್ಯದೊಂದಿಗೆ ನಿವೃತ್ತ ಹೈಕೋರ್ಟ್ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ಸ್ವತಂತ್ರ ಮಾಧ್ಯಮ ಆಯೋಗವನ್ನು (ಮಾಧ್ಯಮ ಒಂಬುಡ್ಸ್ ಮನ್) ಸ್ಥಾಪಿಸುವ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಕೋರಿದ್ದಾರೆ.

 

ಇಂತಹ ಶಾಸನಬದ್ಧ, ಸ್ವಾಯತ್ತ ಸಂಸ್ಥೆಯು ನೈತಿಕ ಪತ್ರಿಕೋದ್ಯಮವನ್ನು ಎತ್ತಿಹಿಡಿಯಲು, ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ರಕ್ಷಿಸಲು ಮತ್ತು  ಸ್ವಾತಂತ್ರ್ಯದ ಜವಾಬ್ದಾರಿತನವನ್ನು ಖಚಿತಪಡಿಸಿಕೊಳ್ಳಲು, ತಪ್ಪು ಮಾಹಿತಿ, ಪಾವತಿ ಸುದ್ದಿ, ದ್ವೇಷ ಭಾಷಣ, ಅನೈತಿಕ ವರದಿಗಾರಿಕೆ ತಡೆಯಲು ನಿಷ್ಪಕ್ಷಪಾತವಾಗಿ ಮಾಧ್ಯಮ ಕಾರ್ಯನಿರ್ವಹಿಸಲು ಇಂತಹ ಆಯೋಗದ ಅಗತ್ಯವಿದೆ. ಆಯೋಗವನ್ನು ಸ್ಪಷ್ಟ ಮಾಧ್ಯಮ ನೀತಿಯ ಆಧಾರದ ಮೇಲೆ ರಚಿಸಬೇಕು ಮತ್ತು ಅದರ ಮೂಲ ಉದ್ದೇಶಗಳಲ್ಲಿ ಒಂದು ಪತ್ರಕರ್ತರ ಹಕ್ಕುಗಳನ್ನು ರಕ್ಷಿಸುವ ಕಾನೂನಾಗಿರಬೇಕು. ಎಂದು ಪ್ರತಿಪಾದಿಸಿದ್ದಾರೆ.

ಜೊತೆಗೆ ಹಿರಿಯ ಪತ್ರಕರ್ತರ ಕಲ್ಯಾಣದ ಜೊತೆಗೆ ಅವರ ಘನತೆ ಮತ್ತು ಆರ್ಥಿಕ ಭದ್ರತೆಯನ್ನು ಒದಗಿಸಲು ಕ್ರಮ ತೆಗೆದುಕೊಳ್ಳಬೇಕು. ಹಿರಿಯ ಪತ್ರಕರ್ತರು ಜನರ ಧ್ವನಿಯನ್ನು ಪ್ರತಿನಿಧಿಸುವಲ್ಲಿ ಮತ್ತು ಸಂಸ್ಥೆಗಳನ್ನು ಹೊಣೆಗಾರರನ್ನಾಗಿ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಪತ್ರಿಕೋದ್ಯಮವು ವಾಣಿಜ್ಯ ಹಿತಾಸಕ್ತಿಗಳಿಗಿಂತ ಹೆಚ್ಚಾಗಿ ಸೇವಾ ಮನೋಭಾವದಿಂದ ಪ್ರೇರೇಪಿಸಲ್ಪಟ್ಟಿದ್ದ ಕಾಲಘಟ್ಟದಲ್ಲಿ, ಅನೇಕರು ತಮ್ಮ ಇಡೀ ವೃತ್ತಿಜೀವನವನ್ನು ಸಾರ್ವಜನಿಕ ಸೇವೆಗಾಗಿ ಮುಡಿಪಾಗಿಟ್ಟಿದ್ದಾರೆ. ಅವರು ಹೆಚ್ಚಾಗಿ ಅತ್ಯಲ್ಪ ವೇತನಕ್ಕೆ ಕಠಿಣ ಪರಿಸ್ಥಿತಿಗಳಲ್ಲಿ ಮತ್ತು ಶಾಸನಬದ್ಧ ವೇತನ ರಕ್ಷಣೆಗಳ ಸಂಪೂರ್ಣ ಪ್ರಯೋಜನಗಳಿಲ್ಲದೆ ಸೇವೆ ಸಲ್ಲಿಸಿದ್ದಾರೆ.

ಇಂದು ಅನೇಕ ಹಿರಿಯ ಪತ್ರಕರ್ತರು ಆರ್ಥಿಕ ಸಂಕಷ್ಟ, ಅಸಮರ್ಪಕ ಆರೋಗ್ಯ ಸೇವೆಗಳು ಮತ್ತು ಪದೇಪದೇ ಆಡಳಿತಾತ್ಮಕ ತೊಂದರೆಗಳನ್ನು ಎದುರಿಸುತ್ತಿದ್ದಾರೆ. ಕನಿಷ್ಠ ಮೂಲಭೂತ ಸೌಲಭ್ಯಗಳನ್ನು ಪಡೆಯಲು ಅವರು ಅನೇಕ ಅಧಿಕಾರಿಗಳ ಬಳಿ ಅಲೆಯಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ. ಸುಸ್ಥಿರ ಪಿಂಚಣಿ ಯೋಜನೆ, ಕೈಗೆಟಕುವ ದರದಲ್ಲಿ ಆರೋಗ್ಯ ಸೇವೆಗಳ ಲಭ್ಯತೆ, ಗೌರವಧನ ಮತ್ತು ರಾಜ್ಯಮಟ್ಟದ ಮಾನ್ಯತೆ ನೀಡಲು ಕ್ರಮ ತೆಗೆದುಕೊಳ್ಳಬೇಕು.

ಸ್ವತಂತ್ರ ಪತ್ರಕರ್ತರ ಮಾನ್ಯತಾ ಪತ್ರದ ಪ್ರಕ್ರಿಯೆಯ ಸರಳೀಕರಣಗೊಳಿಸಬೇಕು. 25 ವರ್ಷಗಳಿಗೂ ಹೆಚ್ಚು ವೃತ್ತಿಪರ ಸೇವೆ ಸಲ್ಲಿಸಿರುವ ಅನೇಕ ಹಿರಿಯ ಪತ್ರಕರ್ತರು ವಾರ್ಷಿಕ ನವೀಕರಣದ ಸಮಯದಲ್ಲಿ ಅನಗತ್ಯ ಅಧಿಕಾರಶಾಹಿ ಅಡೆತಡೆಗಳು ಮತ್ತು ಅಸಮರ್ಪಕ ನಡವಳಿಕೆಗಳನ್ನು ಎದುರಿಸುತ್ತಿದ್ದಾರೆ. ಸೂಕ್ತ ವೃತ್ತಿಪರ ಮಾನದಂಡಗಳು ಮತ್ತು ಪರಿಶೀಲನೆಗೆ ಒಳಪಟ್ಟು. ಅರ್ಹ ಹಿರಿಯ ಪತ್ರಕರ್ತರಿಗೆ ದೀರ್ಘಾವಧಿಯ, ಜೀವಿತಾವಧಿಯ ಅಥವಾ ಸರಳೀಕೃತ ಮಾನ್ಯತಾ ಪ್ರಕ್ರಿಯೆಯನ್ನು ಪರಿಚಯಿಸಬೇಕೆಂದು ಎಂ.. ಪೊನ್ನಪ್ಪ ಮನವಿ ಮಾಡಿದ್ದಾರೆ.

Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಯಶಸ್ವಿಯಾಗಿ ನಡೆದ ಜಿಂದಾಲ್ ಸ್ಟೀಲ್ ಸಿಟಿ ರನ್ 2026ಹವಾಮಾನ-ಸಹನಶೀಲ ಕೃಷಿ ಮತ್ತು ಶಾಸನಾತ್ಮಕ ಸಾಮರ್ಥ್ಯ ನಿರ್ಮಾಣ ಕುರಿತು ಎನ್ಎಫ್ಪಿಆರ್ಸಿ ಕಾರ್ಯಾಗಾರ ಆಯೋಜನೆಕೊಪ್ಪಳದಲ್ಲಿ ಆ.04ಕ್ಕೆ ಬೃಹತ್ ಕಟ್ಟಡ ಕಾರ್ಮಿಕರ ಪ್ರತಿಭಟನಾ ಮೆರವಣಿಗೆ : ಪೋಸ್ಟರ್ ಬಿಡುಗಡೆ'ಕಸಾಪ ಘನತೆ, ಗೌರವ ಎತ್ತಿ ಹಿಡಿದು ಪರಂಪರೆ ಉಳಿಸೋಣ: ಜಾಣಗೆರೆಸಾಮಾಜಿಕ ಬದಲಾವಣೆಗೆ ಪತ್ರಿಕೆಗಳ ಪಾತ್ರ ಮಹತ್ವದ್ದು - ಮೊಹಮ್ಮದ್ ಜುಬೇರಗೆಳೆತನ: ಮಾನವೀಯತೆಯ ಮಹಾಕಾವ್ಯಕೊತ್ತಲಚಿಂತ ಗ್ರಾಮದಲ್ಲಿ ಮಳೆಗಾಗಿ ಅಖಂಡ ಭಜನಾ ಸಪ್ತಾಹಕಳಪೆ ಆಹಾರ ಮಾರಾಟ: ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಸಾರ್ವಜನಿಕರ ಆಕ್ರೋಶಸಮಾಜಮುಖಿ ವೃತ್ತಿಪರರನ್ನಾಗಿ ರೂಪಿಸುವುದು ಶಿಕ್ಷಣದ ನಿಜವಾದ ಉದ್ದೇಶ1.40 ಕೋಟಿ ವೆಚ್ಚದ ರಸ್ತೆ–ಚರಂಡಿ ಕಾಮಗಾರಿಗಳಿಗೆ ಚಾಲನೆ